

ಪುತ್ತೂರು: ತಾಲೂಕು ಕಂದಾಯ ಇಲಾಖೆಯ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುತ್ತಿಲ್ಲ ಮತ್ತು ಕೆಲವು ಕಚೇರಿಗಳು ಕರ್ತವ್ಯದ ಸಮಯದಲ್ಲೂ ಬಾಗಿಲು ಹಾಕಿಕೊಂಡಿರುತ್ತವೆ ಎಂಬ ದೂರಿನ ಹಿನ್ನಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಶನಿವಾರ ಬೆಳಗ್ಗೆ ದಿಢೀರ್ ಭೆಟಿ ನೀಡಿ ಹಾಜರಾತಿ ಪರಿಶೀಲನೆ ನಡೆಸಿದರು.
ಮಿನಿ ವಿಧಾನಸೌದದಲ್ಲಿರುವ ಎಲ್ಲ ಇಲಾಖೆಗಳ ಪ್ರತಿ ವಿಭಾಗಗಳಿಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭೂ ಮಾಪನಾ ಇಲಾಖೆಯ ಕಚೇರಿಯಲ್ಲಿ ಯಾರೂ ಇಲ್ಲದೆ ಇರುವುದು ಕಂಡುಬಂದಿದೆ. ಅಽಕಾರಿಯ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಅಽಕಾರಿ ಇಲ್ಲದಿದ್ದರೆ ಕಚೇರಿಯನ್ನು ಯಾಕೆ ಓಪನ್ ಇಟ್ಟಿದ್ದೀರಿ ಬಂದ್ ಮಾಡಿ ಎಂದು ಶಾಸಕರೇ ಕಚೇರಿಯ ಬಾಗಿಲನ್ನು ಮುಚ್ಚಿ ಬೀಗ ಹಾಕುವಂತೆ ತಿಳಿಸಿದರು. ಇಲ್ಲಿನ ಅಽಕಾರಿಗಳು ವರದಿ ನೀಡಿದ ಬಳಿಕ ಬೀಗ ತೆಗೆಯುವಂತೆ ತಹಸೀಲ್ದಾರ್‌ಗೆ ಸೂಚಿಸಿದರು. ಈ ವೇಳೆ ಅಲ್ಲಿಗೆ ಬಂದ ಎಡಿಎಲ್‌ಆರ್ ಕಡಬಕ್ಕೆ ಹೋಗಲಿದ್ದ ಕಾರಣ ಕಚೇರಿಯಲ್ಲಿ ನಾನಿರಲಿಲ್ಲ ಎಂದು ಶಾಸಕರಿಗೆ ತಿಳಿಸಿದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಎಲ್ಲಾ ಅಽಕಾರಿಗಳು, ಸಿಬ್ಬಂದಿ ಬೆಳಿಗ್ಗೆ ೧೦ ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು. ಕಚೇರಿಗೆ ತಡವಾಗಿ ಬರುವುದನ್ನು ಸಹಿಸುವುದಿಲ್ಲ. ಜನ ಕಚೇರಿಗೆ ಬರುವಾಗ ಅಽಕಾರಿ, ಸಿಬ್ಬಂದಿ ಇರಬೇಕು, ದೂರುಗಳು ಬಾರದ ಹಾಗೇ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಅಽಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಪುರಂದರ ಹೆಗ್ಡೆ ತಾಲೂಕು ಕಚೇರಿಯ ಅಽಕಾರಿ ಸಿಬ್ಬಂದಿಯ ಬಗ್ಗೆ ಮಾಹಿತಿ ನೀಡಿದರು. ರಜೆ ಹಾಕದೆ ಕಚೇರಿಗೆ ಗೈರಾಗಿರವ ಅಽಕಾರಿಗಳಗೆ ಶೋಕಾಸ್ ನೋಟೀಸ್ ನೀಡುವಂತೆ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರಿಗೆ ಶೋಕ್ ರೈ ಸೂಚನೆ ನೀಡಿದರು.