

ಎನ್.ಆರ್.ಪುರ: ಗ್ಯಾರಂಟಿ ಯೋಜನೆ ಜಾರಿಯಾದರೂ ಯಾವುದೇ ಅಭಿವೃದ್ಧಿಗೂ ಅನುದಾನ ಕಡಿಮೆ ಮಾಡಿಲ್ಲ. ಶೃಂಗೇರಿ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಕೋಟ್ಯಾಂತರ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಶನಿವಾರ ತಾಲೂಕು ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶ ಹಾಗೂ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಶೃಂಗೇರಿ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಮಂಜೂರು ಮಾಡಲಾಗಿದೆ. ಗ್ರಾಮೀಣ ಭಾಗದ ಮನೆ ಮನೆಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಯೋಜನೆಯಡಿ 155 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
ತಾಲೂಕಿನಲ್ಲಿ ಒಟ್ಟು ವಿದ್ಯುತ್ ಸಂಪರ್ಕ ಹೊಂದಿರುವವರು 20,617 ಕುಟುಂಬಗಳು, ಅವುಗಳಲ್ಲಿ ಗೃಹಜ್ಯೋತಿಗೆ 19,651 ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. 1066 ಕುಟುಂಬಗಳು ಇದರ ಪ್ರಯೋಜನ ಪಡೆದಿಲ್ಲ. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲು ಹಾಗೂ ಆ ಕುಟುಂಬಗಳ ಮಾಹಿತಿ ಪಡೆದು ಸವಲತ್ತು ದೊರಕಿಸಿಕೊಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಗೆ ತಾಲೂಕಿಗೆ ಪ್ರತಿ ತಿಂಗಳೂ 60.85 ಲಕ್ಷ ಹಣ ಭರಿಸಲಾಗುತ್ತಿದೆ. ತಾಲೂಕಿನಲ್ಲಿ 14,647 ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿದ್ದು 2583 ಕ್ವಿಂಟಾಲ್ ಅಕ್ಕಿ ವಿತರಿಸಲಾಗುತ್ತಿದೆ. ತಾಲೂಕಿಗೆ ಈ ಯೋಜನೆಗಾಗಿ 68.52 ಲಕ್ಷ ಹಣ ಜಮೆ ಆಗುತ್ತಿದೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿದ್ದಕ್ಕಾಗಿ ವ್ಯಾಪಕ ಪರ-ವಿರೋಧಗಳು ವ್ಯಕ್ತವಾದವು. ಆದರೆ ಸಿದ್ದರಾಮಯ್ಯ ಯಾವುದಕ್ಕೂ ಜಗ್ಗದೆ ಎಲ್ಲ ಗ್ಯಾರಂಟಿಗಳನ್ನೂ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಜನರ ಕಷ್ಟ ಅರಿಯದವರು ಹಾಗೂ ಕೇವಲ ರಾಜಕೀಯ ಲಾಭಕ್ಕಾಗಿ ಭಾಷಣ ಮಾಡುವವರು ಈ ಭಾಗ್ಯಗಳನ್ನು ಬಿಟ್ಟಿ ಭಾಗ್ಯಗಳೆಂದು ವ್ಯಂಗ್ಯವಾಡುತ್ತಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮುಖಂಡ ಬಿ.ಎಸ್.ಸುಬ್ರಹ್ಮಣ್ಯ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಗ್ರಾಪಂ ಅಧ್ಯಕ್ಷರಾದ ರತ್ನಮ್ಮ, ಕೆ.ಟಿ.ನಾಗರತ್ನ್ನಾ, ಶೈಲಾ ಮಹೇಶ್, ಮನೋಹರ್, ಅಬ್ದುಲ್ ಲತ್ೀ, ರೀನಾ ಬೆನ್ನಿ, ರಾಜೇಶ್, ಸದಾಶಿವ, ಪಪಂ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯರಾದ ಶೋಜ, ಸುರಯ್ಯಬಾನು, ಸೈಯದ್‌ವಸೀಂ, ಗೇರ್‌ಬೈಲ್ ನಟರಾಜ್, ಕೊಪ್ಪ ಡಿವೈಎಸ್ಪಿ ಅನಿಲ್‌ಕುಮಾರ್ ಇತರರಿದ್ದರು.