ತಾಕತ್ತಿದ್ದರೆ ಮುಟ್ಟಿ ನೋಡಿ… ಡಿ.ಕೆ. ಶಿವಕುಮಾರ್​ಗೆ ಬಹಿರಂಗ ಸವಾಲು ಹಾಕಿದ ರೇಣುಕಾಚಾರ್ಯ

Renukacharya
Published on

ದಾವಣಗೆರೆ: ನಿಮಗೆ ತಾಕತ್ತಿದ್ದರೆ ಬಜರಂಗದಳ, ವಿಶ್ವ ಹಿಂದು ಪರಿಷತ್ ಸಂಘ ಪರಿವಾರವನ್ನು ಮುಟ್ಟಿ ನೋಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರಿಗೆ ಶಾಸಕ ರೇಣುಕಾಚಾರ್ಯ ಬಹಿರಂಗ ಸವಾಲು ಹಾಕಿದ್ದಾರೆ.

ಬ್ಯಾಂಕ್ ರಾಜಕಾರಣ

ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ನಮ್ಮ ಸಂಘಟನೆಗಳನ್ನು ಮುಟ್ಟಿ, ಆಮೇಲೆ ನಿಮ್ಮ ಕತೆ ಏನಾಗುತ್ತದೆ ನೋಡಿ.ಚುನಾವಣೆ ಸಂದರ್ಭದಲ್ಲಿ ಈ ರೀತಿ ವಿವಾದಾತ್ಮಕ ಹೇಳಿಕೆ ಗೌರವ, ಶೋಭೆ ತರುವಂತದಲ್ಲ. ವೋಟು ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ನಿಮ್ಮ ಉದ್ದೇಶ ಏನು?

ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಹಿಂದು ಪರ ಸಂಘಟನೆ ಕಟ್ಟಲು ಆಗುವುದಿಲ್ಲ. ಇದು ಹಿಂದು ದೇಶ. ಹಿಂದು ದೇಶದಲ್ಲಿ ನಾವಿದ್ದೇವೆ. ನಾವೇನು ಮುಸ್ಲಿಂ, ಕ್ರಿಶ್ಚಿಯನ್ನರನ್ನು ಹೊಡೆದು ಓಡಿಸುತ್ತಿದ್ದೇವಾ? ಪಿಎಫ್ಐ, ಎಸ್​ಡಿಎಫ್​ಐ ಇದೆ. ಅದರ ಬಗ್ಗೆ ನೀವು ಏಕೆ ಚಕಾರ ಎತ್ತಲ್ಲ. ಕೇವಲ ಹಿಂದು ಪರ ಸಂಘಟನೆಗಳ ಮೇಲೆ ಟಾರ್ಗೆಟ್ ಮಾಡುತ್ತೀರಲ್ಲ ನಿಮ್ಮ ಉದ್ದೇಶ ಏನು? ಎಂದು ಡಿಕೆಶಿಗೆ ರೇಣುಕಾಚಾರ್ಯ ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಇಂತಹ ಹೇಳಿಕೆಯಿಂದ ತನ್ನ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿದೆ. ಈ ದೇಶದಲ್ಲಿ ಕಾಂಗ್ರೆಸ್ ಮುಕ್ತ ಆಗಿದೆ. ರಾಜ್ಯದಲ್ಲೂ ಮುಕ್ತ ಆಗುತ್ತದೆ ಎಂದು ಭವಿಷ್ಯ ನುಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net