ರೇಣುಕಾಚಾರ್ಯರ ತಮ್ಮನ ಮಗ ಶವವಾಗಿ ಪತ್ತೆ! ತುಂಗಾ ನಾಲೆಯಲ್ಲಿ ಸಿಕ್ಕ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿತ್ತು ಮೃತದೇಹ

chandrashekahr
Published on

ದಾವಣಗೆರೆ: ಅ.30ರ ರಾತ್ರಿ ಕಾಣೆಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್​ 4 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ.

ನ್ಯಾಮತಿ ಮತ್ತು ಹೊನ್ನಾಳಿ ಮಧ್ಯೆ ಇರುವ ತುಂಗಾ ಮೇಲ್ಡಂಡೆ ನಾಲೆಯ ನೀರಲ್ಲಿ ಗುರುವಾರ ಕಾರೊಂದು ಪತ್ತೆಯಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರನ್ನು ಹೊರತೆಗೆಯುತ್ತಿದ್ದಂತೆ ಇದು ಚಂದ್ರಶೇಖರ್​ಗೆ ಸೇರಿದ ಕ್ರೆಟಾ ಕಾರು ಎಂಬುದು ಗೊತ್ತಾಗಿದೆ. ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್​ರ ಮೃತದೇಹ ಸಿಕ್ಕಿದೆ.

ಕಾರಿನ ಹಿಬ್ಬಂದಿ ಸೀಟಿನಲ್ಲಿ ಚಂದ್ರಶೇಖರ್​ರ ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಮಗನ ಬದುಕಿಲ್ಲ ಎಂದು ತಿಳಿಯುತ್ತಿದ್ದಂತೆ ಶಾಸಕ ರೇಣುಕಾಚಾರ್ಯರು ಕುಸಿದು ಬಿದ್ದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತುಂಗಾ ಮೇಲ್ದಂಡೆ ಮೇಲೆ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net