ಶಾಸಕ ಚನ್ನಬಸಪ್ಪ ಕುಸಿದ ಮನೆಗಳಿಗೆ ಭೇಟಿ, ಪರಿಶೀಲನೆ

mla channabasappa visit Collapsed house
ಶಾಸಕ ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗದಲ್ಲಿ ಮಳೆಯಿಂದ ಕುಸಿದು ಬಿದ್ದ ಮನೆಯನ್ನು ಪರಿಶೀಲಿಸಿದರು.
Published on

ಶಿವಮೊಗ್ಗ: ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಅಧಿಕಾರಿಗಳೊಂದಿಗೆ ಮಳೆಯಿಂದ ಕುಸಿದ ಮನೆಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಶಾಂತಿನಗರದ ಪೀರಾಸಾಬ್, ಮುಮ್ತಾಜ್‌ಬೀ, ತ್ರಿಮೂರ್ತಿನಗರದ ಶಾಂತಮ್ಮ, ಶ್ರೀನಿವಾಸ್, ಶಿವಾಜಿ ರಸ್ತೆಯ ವಿಜೇಂದ್ರ, ಪುರಲೆಯ ರೂಪಾ, ಚೌಡೇಶ್, ಮಂಜಮ್ಮ, ಗುರುಪುರದ ಗೌರಿ, ವಿದ್ಯಾನಗರ ಭೋವಿ ಕಾಲನಿಯ ಸುಶೀಲಮ್ಮ, ಪ್ಯಾರಿಜಾನ್, ವಿದ್ಯಾನಗರ 4ನೇ ಕ್ರಾಸ್‌ನ ಗಣೇಶ್, ಸವಾಯಿಪಾಳ್ಯದ ಜಾಮೀಯಾ ಮಸೀದಿ, ಗೋಪಾಳ ಜೆಪಿನಗರದ ರತ್ನೋಜಿ ಎಂಬುವರ ಮನೆಗಳಿಗೆ ಭೇಟಿ ಹಾನಿ ಪರಿಶೀಲಿಸಿದರು. ತಹಸೀಲ್ದಾರ್ ಬಿ.ಎನ್.ಗಿರೀಶ್, ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net