ಘೋಷಣೆ ಮಾಡಿದ ಮಾತ್ರಕ್ಕೆ ಕೋಲಾರವೇ ಅಂತಿಮ ಅಲ್ಲ, ಕೊನೇ ಕ್ಷಣದಲ್ಲಿ‌ ಕ್ಷೇತ್ರ ಬದಲಾವಣೆ ಆಗಬಹುದು: ಶಾಸಕ ಯತೀಂದ್ರ

yathindra siddaramaiah
Published on

ಬೆಂಗಳೂರು: ಘೋಷಣೆ ಮಾಡಿದ ಮಾತ್ರಕ್ಕೆ ಕೋಲಾರ ಕ್ಷೇತ್ರವೇ ಫೈನಲ್‌ ಅಲ್ಲ. ಕೊನೇ ಕ್ಷಣದಲ್ಲಿ‌ ಕ್ಷೇತ್ರ ಬದಲಾವಣೆ ಆಗಬಹುದು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಕುರಿತು ಸಿದ್ದರಾಮಯ್ಯರ ಕುಟುಂಬದ ಮೂಲ ದೇವತೆ ಚಿಕ್ಕಮ್ಮತಾಯಿ ನುಡಿದ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ, ಕಳೆದ ಶನಿವಾರ ಮಳವಳ್ಳಿಯ ಚಿಕ್ಕಮ್ಮತಾಯಿ ದೆವಸ್ಥಾನಕ್ಕೆ ಹೋಗಿದ್ದೆ. ಆ ವೇಳೆ ಅರ್ಚಕರ ಮೈ ಮೇಲೆ ದೇವರು ಬಂದಿಂದೆ ಎಂದು ಈ ರೀತಿ ಹೇಳಿದರು. ನಾನು ಅದನ್ನು ಯಾವ ರೀತಿ ಸ್ವೀಕರಿಸಬೇಕು ಅಂತಲೇ ಯೋಚಿಸಿಲ್ಲ. ಇದನ್ನ ತಂದೆಯರ ಬಳಿಯೂ ಚರ್ಚೆ ಮಾಡಿಲ್ಲ. ಮೇಲಾಗಿ ಅಲ್ಲಿ ಎರಡು ಕ್ಷೇತ್ರದಲ್ಲಿ ನಿಲ್ಲಿ ಎಂದು ಹೇಳಿಲ್ಲ. ಎರಡೂ ಕ್ಷೇತ್ರದಲ್ಲಿ ನಿಲ್ಲುವುದು ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟದ್ದು. ಹೈಕಮಾಂಡ್ ಇದನ್ನು ತೀರ್ಮಾನ ಮಾಡುತ್ತದೆ ಎಂದರು.

ಚುನಾವಣೆ ಘೋಷಣೆಗೆ ಇನ್ನೂ ಸಮಯ ಇದೆ. ಆ ಕ್ಷಣದ ರಾಜಕೀಯ ಸನ್ನಿವೇಶ ನೋಡಿ ತೀರ್ಮಾನ ಮಾಡುತ್ತಾರೆ. ಘೋಷಣೆ ಮಾಡಿದ ಮಾತ್ರಕ್ಕೆ ಕೋಲಾರವೇ ಅಂತಿಮ ಅಲ್ಲ. ಸಿದ್ದರಾಮಯ್ಯರಿಗೆ ಕೊನೇ ಚುನಾವಣೆಯನ್ನು ವರುಣಾದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತೇನೆ. ಕೋಲಾರದಲ್ಲಿ ಎಲ್ಲರೂ ಒಟ್ಟಾಗುವ ಸಾಧ್ಯತೆ ಇದೆ. ಅಂದಿನ ರಾಜಕೀಯ ಸನ್ನಿವೇಶ ಗಮನಿಸಿ ತೀರ್ಮಾನ ಮಾಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net