ಮಿಜೋರಾಂನಲ್ಲಿ ಗುರುವಾರ ರಾತ್ರಿ ಪ್ರಬಲ ಭೂಕಂಪ

earthquake
Published on

ಛಾಂಪೈ: ಮಿಜೋರಾಂನ ಛಾಂಪೈನಲ್ಲಿ ಗುರುವಾರ ರಾತ್ರಿ 7.29ರಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಛಾಂಪೈನಿಂದ 98 ಕಿ.ಮೀ. ಆಗ್ನೇಯ ದಿಕ್ಕಿನಲ್ಲಿ 98 ಕಿ.ಮೀ. ದೂರದಲ್ಲಿ ಸ್ಥಿತವಾಗಿದ್ದ ಕಂಪನ 5.0 ತೀವ್ರತೆ ಹೊಂದಿತ್ತು.

ಈ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಸ್ತಿಪಾಸ್ತಿ ಅಥವಾ ಪ್ರಾಣಹಾನಿಯ ಬಗ್ಗೆ ಮಾಹಿತಿಗಳು ತಕ್ಷಣವೇ ಲಭ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net