ಬಿಜೆಪಿ ಸೇರಿರುವ ಮಿಥುನ್ ಚಕ್ರವರ್ತಿಗೆ 'ವೈ' ಶ್ರೇಣಿ ಭದ್ರತೆ ನೀಡಿದ ಕೇಂದ್ರ ಸರ್ಕಾರ

mithun
Mithun Chakraborty
Published on

ಕಲ್ಕತ್ತ: ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಬಾಲಿವುಡ್ ನಟ ಹಾಗೂ ಮಾಜಿ ಸಂಸದ ಮಿಥುನ್ ಚಕ್ರವರ್ತಿ ಅವರಿಗೆ ಕೇಂದ್ರ ಸರ್ಕಾರ 'ವೈ' ಶ್ರೇಣಿಯ ಭದ್ರತೆಯನ್ನು ನೀಡಿದೆ.

ಈ ವಿಷಯವನ್ನು ಖಚಿತಪಡಿಸಿರುವ ಕೇಂದ್ರ ಗೃಹ ಇಲಾಖೆ, ಮಿಥುನ್ ಅವರಿಗೆ ಸಿಐಎಸ್​ಎಫ್ ಕಮಾಂಡೋಗಳು ದಿನದ 24 ತಾಸೂ ಭದ್ರತೆಯನ್ನು ನೀಡಲಿದ್ದಾರೆ ಎಂದು ತಿಳಿಸಿದೆ.

ಕಳೆದ ಭಾನುವಾರ ಕಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಿಥುನ್ ಬಿಜೆಪಿ ಸೇರಿದ್ದರು. ತಾವು ಪಶ್ಚಿಮ ಬಂಗಾಳ ಜನರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಬಿಜೆಪಿ ಸೇರಿದ್ದೇನೆ ಎಂದು ಅವರು ಹೇಳಿದ್ದರು.

ಟಿಎಂಸಿಯಿಂದ ರಾಜ್ಯಸಭೆ ಸಂಸದರೂ ಆಗಿದ್ದ ಮಿಥುನ್ ಚಕ್ರವರ್ತಿ, ಆರೋಗ್ಯ ಕಾರಣದಿಂದ ರಾಜ್ಯಸಭೆ ಸದಸ್ಯತ್ವ ತೊರೆದಿದ್ದರು. ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಿಥುನ್​ ಸೇರ್ಪಡೆಯಿಂದ ಬಂಗಾಳ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಅಲ್ಲದೇ ಅವರು ಚುನಾವಣೆಯ ನಲವತ್ತು ಸ್ಟಾರ್​ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net