ಕಾಣೆಯಾಗಿದ್ದ ಯಕ್ಷಗಾನ ಕಲಾವಿದ ಉದಯ ಹೆಗಡೆ ಬೆಂಗಳೂರಿನಲ್ಲಿ ಪತ್ತೆ

yakshagana
Published on

ಉಡುಪಿ: ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಪೆರ್ಡೂರು ಮೇಳದ ಯಕ್ಷಗಾನ ಕಲಾವಿದ ಕಡಬಾಳ ಉದಯ ಹೆಗಡೆ(37) ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಉದಯ ಹೆಗಡೆ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ, ಯಕ್ಷಗಾನ ಕಲಾವಿದೆ, ಶಿಕ್ಷಕಿಯಾಗಿರುವ ಕೊಂಡದಕುಳಿ ಅಶ್ವಿನಿ ಹೆಗಡೆ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಏ.21ರಂದು ಸಾಯಂಕಾಲ ಉದಯ ಅವರು ಕಾರಿನಲ್ಲಿ ಹೊರಗೆ ಹೋದವರು ವಾಪಸ್ ಬಂದಿಲ್ಲ. ಮೊಬೈಲ್ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಶಿರಸಿಯಲ್ಲಿನ ಪತಿಯ ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗಲೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ತಮ್ಮನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆರೈಕೆಗೆ ಉದಯ ಹೆಗಡೆ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net