7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗನ ಅಂತ್ಯ ಸಂಸ್ಕಾರ ಮಾಡಿದ್ದ ಪೋಷಕರಿಗೆ ಕಾದಿದ್ದು ಅಚ್ಚರಿ!

Untitled design - 2023-08-01T174607.233
Published on

ಬಿಹಾರ: 7 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಸಾವನ್ನಪ್ಪಿದ್ದಾನೆಂದು ತಿಳಿದ ಪೋಷಕರು ಆತನ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು. ಆದ್ರೆ, ಇದೀಗ ತಂದೆ-ತಾಯಿಗೆ ಅಚ್ಚರಿ ಎದುರಾಗಿದ್ದು, ನಾಪತ್ತೆಯಾಗಿದ್ದ ಮಗನು ಮನೆಗೆ ಹಿಂದಿರುಗಿದ್ದಾನೆ.

7 ವರ್ಷಗಳ ಹಿಂದೆ ಮನೆಬಿಟ್ಟು ಹೋದ ಪುತ್ರ ಹಿಂದಿರುಗದ ಕಾರಣ ಆತ ಮೃತಪಟ್ಟಿದ್ದಾನೆ ಎಂದು ಹೆತ್ತವರು ಭಾವಿಸಿದ್ದು, ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು. ಆದ್ರೆ, ಗ್ರಾಮದ ಪಂಚಾಯತ್ ಮುಖ್ಯಸ್ಥರ ಸಹಾಯದಿಂದ ಅವರ ಪುತ್ರ ಇದೀಗ​ ಮನೆಗೆ ವಾಪಾಸ್ ಬಂದಿದ್ದು, ತಂದೆ-ತಾಯಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಏಳು ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ರಾಯ್ ಎಂದು ಗುರುತಿಸಲಾಗಿದ್ದು, ಮನೆಬಿಟ್ಟು ಹೋದ ರಾಯ್​ ದೆಹಲಿಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸದಸ್ಯರೊಡನೆ ವಾಸಿಸುತ್ತಿದ್ದ. ಆತನಿಗೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾದ ವೇಳೆ ಸಂಸ್ಥೆಯ ವ್ಯಕ್ತಿಯೊಬ್ಬರು ಈತನ ಹಿನ್ನೆಲೆ ತಿಳಿದು, ರಾಯ್​ ವಾಸವಿದ್ದ ಗ್ರಾಮದ ಪಂಚಾಯತ್ ಮುಖ್ಯಸ್ಥರನ್ನು ಸಂಪರ್ಕಿಸಿ, ದೆಹಲಿಯಿಂದ ಸಾರಿಗೆ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ.

ಪಂಚಾಯತ್ ಮುಖ್ಯಸ್ಥರ ಸಹಾಯದಿಂದ ಪೋಷಕರಿಗೆ ಇದೀಗ ತಮ್ಮ ಮಗ ವಾಪಸ್​ ಸಿಕ್ಕಿದ್ದು, ಈ ಬಗ್ಗೆ ಗಂಡ-ಹೆಂಡತಿ ಸಂತಸ ವ್ಯಕ್ತಪಡಿಸಿದ್ದಾರೆ. ಕುಟುಂಬದವರು ನೀಡಿದ ಮಾಹಿತಿ ಪ್ರಕಾರ, ರಾಯ್​ ಮನೆಯಿಂದ ಹೋದಾಗ ಅವರ ವಯಸ್ಸು 30 ವರ್ಷ. ಊರು ಬಿಟ್ಟು ಹೋಗುವ ಮೊದಲೇ ಅವರ ಹೆಂಡತಿ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net