ನಾಪತ್ತೆಯಾಗಿದ್ದ ಮಾಡೆಲ್ ಶೀತಲ್ ಕತ್ತು ಸೀಳಿ ಬರ್ಬರ ಹತ್ಯೆ: ಕಾಲುವೆಯಲ್ಲಿ ಶವ ಪತ್ತೆ! | Model Sheetal

dk - 2025-06-16T203924.019
Published on

Model Sheetal: ಎರಡು ದಿನಗಳ ಹಿಂದೆ ಹರಿಯಾಣದಲ್ಲಿ ನಾಪತ್ತೆಯಾಗಿದ್ದ ಮಾಡೆಲ್ ಶೀತಲ್ ಅಲಿಯಾಸ್ ಸಿಮ್ಮಿ ಚೌಧರಿ ಶವವಾಗಿ ಪತ್ತೆಯಾಗಿದ್ದಾರೆ.

ಹರಿಯಾಣದ ಸೋನಿಪತ್‌ನ ಖಾರ್ಖೋಡಾ ಪ್ರದೇಶದಲ್ಲಿ ಶೀತಲ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳು ಆಕೆಯ ಕತ್ತು ಸೀಳಿ ಹಲ್ಲೆ ನಡೆಸಿದ್ದಾರೆ.

ಖಾಂಡಾ ಗ್ರಾಮದ ಬಳಿಯ ಕಾಲುವೆಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಆಕೆಯ ಕೈ ಮತ್ತು ಎದೆಯ ಮೇಲಿನ ಹಚ್ಚೆಗಳ ಆಧಾರದ ಮೇಲೆ ಪೊಲೀಸರು ಆಕೆಯನ್ನು ಗುರುತಿಸಿದ್ದಾರೆ. ಶೀತಲ್ ಹರ್ಯಾನ್ವಿ ಸಂಗೀತ ವೀಡಿಯೊಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸಹೋದರಿ ನೇಹಾ ಅವರೊಂದಿಗೆ ಖಲೀಲಾ ಮಜ್ರಾದಲ್ಲಿ ವಾಸಿಸುತ್ತಿದ್ದಾರೆ.

ಜೂನ್ 14 ರಂದು ಅಹರ್ ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕಾಗಿ ಹಳ್ಳಿಗೆ ಹೋಗಿದ್ದರು. ಶೀತಲ್ ಮನೆಗೆ ಹಿಂತಿರುಗದ ಕಾರಣ ಅವರ ಸಹೋದರಿ ನೇಹಾ ಈ ಹಿಂದೆ ಪಾಣಿಪತ್‌ನ ಮಟ್ಲೌಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೂನ್ 15 ರ ಭಾನುವಾರ ರಾತ್ರಿ ಪೊಲೀಸರು ಶೀತಲ್ ಅವರ ಶವವನ್ನು ಪತ್ತೆ ಮಾಡಿದರು.ಇನ್ನು ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net