ನಾಪತ್ತೆಯಾಗಿದ್ದ ವಕೀಲ ಶವವಾಗಿ ಪತ್ತೆ

HUN-OCT-30-5(K RAJU )
Published on

ಹುಣಸೂರು: ಎರಡು ದಿನಗಳ ನಾಪತ್ತೆಯಾಗಿದ್ದ ವಕೀಲ ಶವವಾಗಿ ಪತ್ತೆಯಾಗಿದ್ದಾರೆ.

ಹುಣಸೂರು ನಗರದ ಗೋಕುಲ ಬಡಾವಣೆಯ ನಿವಾಸಿ ವಕೀಲ ಕೆ.ರಾಜು (52) ಅನುಮಾನಾಸ್ಪದವಾಗಿ ಮೃತಪಟ್ಟವರು. ಇವರಿಗೆ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಮಂಗಳವಾರ ಕೋರ್ಟ್‌ಗೆ ಹೋಗಿ ಬರುತ್ತೇನೆಂದು ವಕೀಲ ರಾಜು ಮನೆಯಿಂದ ಹೊರಟವರು ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಗಾಬರಿಗೊಂಡ ಪತ್ನಿ ವಸಂತಲಕ್ಷ್ಮೀ ಮತ್ತು ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಈ ನಡುವೆ ತಾಲೂಕಿನ ಬಿಳಿಕೆರೆ ಬಳಿಯ ಹೊಸರಾಮನಹಳ್ಳಿ ವ್ಯಾಪ್ತಿಯಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ವಕೀಲರ ಕಾರು ಬುಧವಾರ ಪತ್ತೆಯಾಯಿತು. ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅನುಮಾನಗೊಂಡು ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾರ ಬೆಳಗ್ಗಿನಿಂದ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಸಂಜೆ ವೇಳೆ ವಕೀಲನ ಮೃತದೇಹ ಪತ್ತೆಯಾಯಿತು.ಪತ್ನಿ ವಸಂತಲಕ್ಷ್ಮೀ ನೀಡಿದ ದೂರಿನನ್ವಯ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಸಂಬಂಧಿಕರಿಗೆ ನೀಡಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net