ನಾಪತ್ತೆಯಾಗಿದ್ದವರು ಶವವಾಗಿ ಪತ್ತೆ

Published on

ಮಡಿಕೇರಿ: ನಾಪತ್ತೆಯಾಗಿದ್ದ ವ್ಯಕ್ತಿಗಳಿಬ್ಬರು ಶವವಾಗಿ ಪತ್ತೆಯಾದ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಗುರುವಾರ ನಡೆದಿದೆ.

 ಚೆಂಬು ಗ್ರಾ.ಪಂ ಸದಸ್ಯೆ ಕಮಲ(೩೫) ಹಾಗೂ ಆಕೆಯ ಚಿಕ್ಕಪ್ಪ ಮುತ್ತು(೫೦) ನೇಣಿಗೆ ಶರಣಾದ ದುರ್ದೈವಿಗಳು.

 ಸೆ.೧೫ರ ಸಂಜೆಯಿಂದ ಇಬ್ಬರು ದಬ್ಬಡ್ಕ ಗ್ರಾಮದಿಂದ ನಾಪತ್ತೆಯಾಗಿದ್ದರು. ಅಂದು ಸಂಜೆ ಚೆಂಬು ಗ್ರಾ.ಪಂ ದಬ್ಬಡ್ಕ ವಾರ್ಡ್‌ನ ಸದಸ್ಯೆ ಕಮಲಾ ಹಾಗೂ ಮುತ್ತು ಪಯಸ್ವಿನಿ ನದಿ ದಡದಲ್ಲಿ ಕಾಣಿಸಿಕೊಂಡಿದ್ದರು. ನಂತರ ಕಮಲಾ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು. ಮುತ್ತು ಆಕೆಯನ್ನು ಹೊಳೆಗೆ ತಳ್ಳಿರುವುದಾಗಿಯೂ ಸುದ್ದಿಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಗ್ರಾಮಸ್ಥರು ಮತ್ತು ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಿದರೂ ಸಿಕ್ಕಿರಲಿಲ್ಲ.

 ಗ್ರಾ.ಪಂ ಸದಸ್ಯೆ ಕಮಲ ವಿವಾಹಿತೆಯಾಗಿದ್ದು, ಒಂದು ಮುಗುವಿದೆ. ಮೃತ ಮುತ್ತು ಕಮಲಳ ಸಂಬಂಧಿಯಾಗಿದ್ದಾನೆ. ನಾಪತ್ತೆಯಾಗಿದ್ದ ಇಬ್ಬರು ಮರವೊಂದರಲ್ಲಿ ನೇಣಿಗೆ ಶರಣಾಗಿದ್ದು, ಗುರುವಾರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ನಿಖರ ಮಾಹಿತಿ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net