

ಶ್ರೀನಗರ: ಆರುವರ್ಷಗಳ ಹಿಂದೆ 19 ವರ್ಷದ ಬಲಿಷ್ಠ ಯುವಕನೋರ್ವ ಪುಲ್ವಾಮಾದ ಸಾಂಬೂರಾ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 12ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು, ಆ ಪ್ರವಾಹದ ಮಧ್ಯೆಯೇ ಈಜಿಕೊಂಡು ಹೋಗಿ ರಕ್ಷಣೆ ಮಾಡಿದ್ದ. ಅಂದು ಅವನನ್ನು ದೊಡ್ಡ ಹೀರೋ ಎಂದೇ ಹೊಗಳಲಾಗಿತ್ತು.
ಬರಿ ಜನಸಾಮಾನ್ಯರಷ್ಟೇ ಅಲ್ಲ, ಸರ್ಕಾರವೇ ಆತನ ಕಾರ್ಯವನ್ನು ಶ್ಲಾಘಿಸಿತ್ತು . ಆ ಯುವಕ ಅಸಿಫ್ ಮುಜಾಫರ್ ಮಿರ್ಗೆ ಈಗ 25ವರ್ಷ. ಆದರೆ ಈಗ ಈತ ಉಗ್ರ ಸಂಘಟನೆ ಸೇರಿಕೊಂಡಿದ್ದಾನೆ. ಆಸಿಫ್ ಉಗ್ರರ ಜತೆ ಕೈಸೇರಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಆತ್ಮಹತ್ಯಾ ದಾಳಿಗೆ ಸ್ಫೋಟಕಗಳಿದ್ದ ಬೆಲ್ಟ್, ಜಾಕೆಟ್ ಸಿದ್ಧಪಡಿಸಿದ್ದ ಐಸಿಸ್ ಉಗ್ರ; ಪೊಲೀಸರಿಂದ ಬಾಂಬ್ ನಿಷ್ಕ್ರಿಯ
ಆಗಸ್ಟ್ 10ರಂದು ಆಸಿಫ್ ಕಾಣೆಯಾಗಿದ್ದಾನೆ. ಅಂದು ಅಂಗಡಿಗೆ ಹೋದವನು ಸಂಜೆ ಮನೆಗೆ ಬಂದಿಲ್ಲ. ನಾವು ಸ್ವಲ್ಪ ದಿನ ಅವನಿಗಾಗಿ ಕಾದೆವು. ಎಲ್ಲೋ ಸ್ನೇಹಿತರ ಜತೆ ಹೋಗಿದ್ದಾನೆ ಎಂದೇ ಭಾವಿಸಿದ್ದೆವು. ಆದರೆ ನಾಲ್ಕೈದು ದಿನಗಳಾದರೂ ವಾಪಸ್ ಬಾರದಾಗ ಪೊಲೀಸರಿಗೆ ದೂರು ನೀಡಿದೆವು ಎಂದು ಆಸಿಫ್ ಕುಟುಂಬದವರು ತಿಳಿಸಿದ್ದಾರೆ.
ಆದರೆ ತನಿಖೆಯ ನಂತರ ಹೊರಬಿದ್ದಿದ್ದು ಬೆಚ್ಚಿಬೀಳಿಸುವ ಸತ್ಯವಾಗಿತ್ತು. ಆಸಿಫ್ ಜೈಶ್ ಎ ಮೊಹಮ್ಮದ್ ಉಗ್ರಸಂಘಟನೆಗೆ ಸೇರ್ಪಡೆಯಾಗಿದ್ದಾನೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಮಿಸ್ಟರ್ ಡಿಕೆಶಿ, ನೀವು ಜಾಮೀನಿನ ಮೇಲೆ ಹೊರಗಿದ್ದೀರಿ ಎಂಬುದನ್ನ ಅರಿತುಕೊಳ್ಳಿ; ಪ್ರಹ್ಲಾದ್ ಜೋಶಿ
ಆದರೆ ಆಸಿಫ್ ಇತ್ತೀಚೆಗೆ ಹಲವು ಬಾರಿ ಪೊಲೀಸರಿಂದ ಬಂಧಿತನಾಗಿದ್ದ. ಎರಡು ತಿಂಗಳು ಶ್ರೀನಗರ ಜೈಲಿನಲ್ಲಿಯೂ ಇದ್ದ. ಕೆಲವು ಪ್ರಕರಣಗಳ ವಿಚಾರಣೆಗಳಿಗಾಗಿಯೂ ಈತನನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು ಎಂದು ಕುಟುಂಬದವರೇ ಮಾಹಿತಿ ನೀಡಿದ್ದಾರೆ.
ಆಸಿಫ್ ಪದವೀಧರ. ಈತನ ತಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಈಗ ನಿವೃತ್ತರಾಗಿದ್ದಾರೆ. ಆಸಿಫ್ಗೆ ಓರ್ವ ತಮ್ಮನಿದ್ದು, ಆತ11ನೇ ತರಗತಿಯಲ್ಲಿ ಓದುತ್ತಿದ್ದಾನೆ. (ಏಜೆನ್ಸೀಸ್)