Miss Universe 2024 Winner: ಡೆನ್ಮಾರ್ಕ್ ನ ವಿಕ್ಟೊರಿಯಾ ಜೆರ್ ಥೈಲ್ವಿಗ್​​ಗೆ ಮಿಸ್ ಯುನಿವರ್ಸ್ ಕಿರೀಟ

Miss Universe 2024 Winner
Published on

Miss Universe 2024 Winner : ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್ ಅವರು 73 ನೇ ವಿಶ್ವ ಸುಂದರಿ 2024 ರ ವಿಜೇತರಾಗಿ ಕಿರೀಟವನ್ನು ಅಲಂಕರಿಸಿದ್ದಾರೆ. ಈ ಕುರಿತಾದ ಕೆಲವು ಫೋಟೋಗಳು ಸಖತ್​  ವೈರಲ್​​ ಆಗಿದೆ.

ಮೆಕ್ಸಿಕೋ ನಗರದಲ್ಲಿ ನಡೆದ 73ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ 130 ಸುಂದರಿಯರು ಸ್ಪರ್ಧಿಸಿದ್ದರು. ಇದೀಗ 2024ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ರಿಯಾ ಸಿಂಘಾಗೆ ನಿರಾಶೆಯಾಗಿದೆ. 2024ರ ಇಂಟರ್‌ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್ 21 ವರ್ಷದ ವಿಕ್ಟೋರಿಯಾ ಕ್ಜೇರ್ ವಿಜೇತರಾಗಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೆಕ್ಸಿಕೋದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್ ಮೊದಲ ರನ್ನರ್ ಅಪ್ ಆಗಿ, ನೈಜೀರಿಯಾದ ಸಿನಿದಿಮ್ಮಾ ಅಡೆಟ್ಶಿನಾ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ರಿಯಾ ಸಿಂಘಾ ಅಂತಿಮ ಸುತ್ತಿನಲ್ಲಿ ಟಾಪ್​ 12 ಸ್ಥಾನ ಪಡೆಯುವಲ್ಲಿ ವಿಫಲರಾಗಿದರು.

ಮೆಕ್ಸಿಕೋ ನಗರದಲ್ಲಿ ನಡೆದ 73ನೇ ವಿಶ್ವ ಸುಂದರಿ ಗ್ರ್ಯಾಂಡ್ ಫಿನಾಲೆ ಅದ್ಭುತ ಕಾರ್ಯಕ್ರಮವಾಗಿತ್ತು. ಫೈನಲಿಸ್ಟ್‌ಗಳು ತಮ್ಮ ತಮ್ಮ ದೇಶಗಳ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ.

ಮಾರಿಯೋ ಲೋಪೆಜ್ ಮತ್ತು ಒಲಿವಿಯಾ ಕಲ್ಪೋ ಈವೆಂಟ್ ಅನ್ನು ಆಯೋಜಿಸಿದರು, ಕ್ಯಾಟ್ರಿಯೋನಾ ಗ್ರೇ ಮತ್ತು ಜುರಿ ಹಾಲ್ ಲೈವ್ ಕಾಮೆಂಟರಿ ಒದಗಿಸಿದರು. ಗೌರವಾನ್ವಿತ ತೀರ್ಪುಗಾರರಲ್ಲಿ ಎಮಿಲಿಯೊ ಎಸ್ಟೆಫಾನ್, ಮೈಕೆಲ್ ಸಿಂಕೊ, ಇವಾ ಕವಾಲಿ, ಜೆಸ್ಸಿಕಾ ಕ್ಯಾರಿಲ್ಲೊ, ಜಿಯಾನ್ಲುಕಾ ವಾಚಿ, ನೋವಾ ಸ್ಟೀವನ್ಸ್, ಫರೀನಾ, ಗ್ಯಾರಿ ನಾಡರ್, ಗೇಬ್ರಿಯೆಲಾ ಗೊನ್ಜಾಲೆಜ್ ಮತ್ತು ಕ್ಯಾಮಿಲಾ ಗುರಿಲಾ ಗೈಬಿಟೆಯ್ ಸೇರಿದಂತೆ ಫ್ಯಾಷನ್, ಮನರಂಜನೆ ಇಂಡಸ್ಟ್ರಿಯ ಪ್ರಮುಖ ವ್ಯಕ್ತಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net