

ಬೆಂಗಳೂರು: ಶಾಪ್ ಮುಚ್ಚುವ ವೇಳೆ ಬಂದ ಇಬ್ಬರು ಗ್ರಾಹಕರು ಸರ್ವಿಸ್ ಕೊಟ್ಟಿಲ್ಲ ಅಂತ ಐಸ್ ಕ್ರೀಂ ಪಾರ್ಲರ್‌ನಲ್ಲಿ ಗೂಂಡಾವರ್ತನೆ ತೋರಿದ್ದಾರೆ.
ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ೧೨: ೫೦ ಕ್ಕೆ ಈ ಘಟನೆ ನಡೆದಿದೆ.
ವಿಜಯನಗರ ಎಂ.ಸಿ ಲೇಔಟ್ ಬಳಿ ಇರುವ ಪ್ರತಿಷ್ಠಿತ ಪೊಲಾರ್ ಬೇರ್ ಐಸ್ ಕ್ರೀಂ ಪಾರ್ಲರ್‌ಗೆ ಶನಿವಾರ ರಾತ್ರಿ ೧೨:೫೦ ಕ್ಕೆ ಇಬ್ಬರು ಗ್ರಾಹಕರು ಬಂದಿದ್ದರು. ಶಾಪ್ ಸಿಬ್ಬಂದಿ ರಾತ್ರಿ ೧ ಗಂಟೆಗೆ ಶಾಪ್ ಕ್ಲೋಸ್‌ಗೆ ತಯಾರಿ ನಡೆಸುತ್ತಿದ್ದೇವೆ. ಹೀಗಾಗಿ ಸರ್ವಿಸ್ ನೀಡಲ್ಲ. ಬೇಕಾದರೆ ಪಾರ್ಸೆಲ್ ಕೊಡುತ್ತೇವೆ ಅಂತ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಕೂತು ತಿನ್ನಲು ಸರ್ವಿಸ್ ಕೇಳಿದ್ದಾರೆ. ಈ ವೇಳೆ ವಾಗ್ವಾದವಾಗಿದ್ದು, ಇಬ್ಬರ ಪೈಕಿ ಒಬ್ಬಾತ ಬಿಲ್ಲಿಂಗ್ ಮಾಡುವ ಕಂಪ್ಯೂಟರ್ ತಳ್ಳಿ ಗೂಂಡಾವರ್ತನೆ ತೋರಿದ್ದಾನೆ. ಅಲ್ಲದೇ ಶಾಪ್‌ನಲ್ಲಿ ಮೊದಲೇ ಸರ್ವಿಸ್ ಪಡೆದಿದ್ದ ಗ್ರಾಹಕರನ್ನು
ಹೊರಗೆ ಕಳುಹಿಸಿ ಕೆಲವೇ ಹೊತ್ತಲ್ಲಿ ಶಾಪ್ ಖಾಲಿ ಮಾಡಿಸಬೇಕಷ್ಟೇ ಎಂದು ಆವಾಜ್ ಹಾಕಿ
ಬಿಲ್ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಈ ಎಲ್ಲಾ ದೃಶ್ಯಾವಳಿ ಶಾಪ್‌ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ (ಎನ್‌ಸಿಆರ್) ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.