

ಮುಂಬೈ: ( Dog ) ದೀಪಾವಳಿ ಸಡಗರ ಸಂಭ್ರಮದ ಹಬ್ಬವಾಗಿದೆ. ಈ ಹಬ್ಬಕ್ಕೆ ವಿಶೇಷವಾಗಿ ಪಟಾಕಿ ಹೊಡೆಯುವುದು ಸಾಮಾನ್ಯ. ಆದರೆ ಯುವಕನೊಬ್ಬ ರಸ್ತೆಯಲ್ಲಿನ ಮುಗ್ಧ ನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚಿದ್ದಾನೆ .ಈ ಆಘಾತಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೂಕ ಪ್ರಾಣಿ ಭಯಬೀತವಾಗಿ ಓಡಾಡುತ್ತಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕನ ಮೇಲೆ ನಟ್ಟಿಗರು ಕೀಡಿ ಕಾರುತ್ತಿದ್ದು, ದೀಪಾವಳಿ ಆಚರಿಸುವ ನೆಪದಲ್ಲಿ ಯುವಕರು ಮೂಕ ಪ್ರಾಣಿಗಳ ಜೀವದ ಜೊತೆಗೆ ಆಟವಾಡುತ್ತಿದ್ದಾರೆ. ಈ ಘಟನೆಯ ನಡೆದ ಸ್ಥಳ ಇನ್ನು ಪತ್ತೆಯಾಗಿಲ್ಲ. ಆದರೆ ಈ ದುಷ್ರ್ಕಮಿ ಸಿಗುವ ವರೆಗೂ ಈ ವಿಡಿಯೋ ಶೇರ್ ಮಾಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಡಿಯೋದಲ್ಲಿ ಏನಿದೆ?: ಯುವಕನೊಬ್ಬ ಮೂಖ ಪ್ರಾಣಿ ಬಾಲಕ್ಕೆ ಪಟಾಕಿ ಹಚ್ಚುತ್ತಿರುವುದು ಇನ್ನೊಬ್ಬ ಕಿವಿಯನ್ನು ಹಿಡಿದಿದ್ದಾನೆ. ಪಟಾಕಿ ಸಿಡಿಯುತ್ತಿದ್ದಂತೆ ಪ್ರಾಣ ಉಳಿಸಿಕೊಳ್ಳಲು ಮೂಕ ಪ್ರಾಣಿ ಓಡಾಡಿರುವುದು ನೋಡಬಹುದು. ಈ ಘಟನೆಯಲ್ಲಿ ಮಾತು ಬಾರದ ಪ್ರಾಣಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ವಿಡಿಯೋ ನೋಡಿದ ಪ್ರತಿಯೊಬ್ಬರು ಅವನಿಗೂ ಅದೇ ರೀತಿ ಪಟಾಕಿ ಹಚ್ಚಿ ಓಡಾಡುವಂತೆ ಮಾಡಬೇಕು. ಅಂದಾಗ ಮಾತ್ರ ಪ್ರಾಣಗಳ ನೋವು ಏನು ಎಂದು ಅರಿವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೃತ್ಯಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ವ್ಯಕ್ತಿಯ ಗುರುತು ಪತ್ತೆಯಾಗುವವರೆಗೆ ಶೇರ್ ಮಾಡಿ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.