ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ 'ಮಿರಾಯ್' ಇಂದಿನಿಂದ ಒಟಿಟಿಯಲ್ಲಿ ಹವಾ! | OTT

Untitled design - 2025-10-10T131129.222
Published on

ಈಗಾಗಲೇ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿರುವ ಕಾರ್ತಿಕ್​ ಘಟ್ಟಮನೇನಿ ನಿರ್ದೇಶನದ 'ಮಿರಾಯ್​' ಚಿತ್ರ ಇದೀಗ OTTಗೆ ಲಗ್ಗೆ ಇಟ್ಟಿದೆ.

ಹೌದು, ಒಟಿಟಿ ವೇದಿಕೆಯಾದ ಜಿಯೋಹಾಟ್‌ಸ್ಟಾರ್ ಈ ಸಿನಿಮಾದ ಪ್ರಾಯೋಜಕತ್ವ ಪಡೆದಿದ್ದು, ಇಂದಿನಿಂದಲೇ (ಅ.10) ಮಿರಾಯ್​ ಪ್ರಸಾರವಾಗಲಿದೆ. ಕನ್ನಡ, ತೆಲುಗು, ತಮಿಳು ಸೇರಿ ಮಲಯಾಳಂನಲ್ಲಿ ರಿಲೀಸ್​ ಆಗಿದೆ. ಇನ್ನು ಈ ಚಿತ್ರವೂ ಎಮೋಷನ್, ಪುರಾಣ ಮತ್ತು ಹೈ-ಆಕ್ಟೇನ್ ಆಕ್ಷನ್ ಅನ್ನು ಒಳಗೊಂಡಿದ್ದು, ಹಿಂದೆಂದೂ ನೋಡಿರದ ದೃಶ್ಯ ವೈಭವದಲ್ಲಿ ಬೆರೆಸುವ ವಿಶಿಷ್ಟ ಸಿನಿಮೀಯ ಅನುಭವವನ್ನು ನೀಡುತ್ತದೆ.

ವಿಧಿ ಮತ್ತು ದೈವತ್ವ ಘರ್ಷಿಸುವ ಜಗತ್ತಿನಲ್ಲಿ, ಮಿರಾಯ್ ಮಾನವೀಯತೆಗೆ ಸಮತೋಲನ ಮತ್ತು ಭರವಸೆಯನ್ನು ಪುನಃಸ್ಥಾಪಿಸಲು ಎಲ್ಲಾ ಪ್ರತಿಕೂಲಗಳ ವಿರುದ್ಧ ಹೋರಾಡುವ ಆಯ್ಕೆ ಮಾಡಿದ ಯೋಧನ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೆ, ಬೆರಗುಗೊಳಿಸುವ ದೃಶ್ಯಗಳು, ಅದ್ಬುತ ಪ್ರದರ್ಶನಗಳು ಮತ್ತು ಉತ್ತಮ ನಿರೂಪಣೆಯೊಂದಿಗೆ ಇದೀಗ ಮಿರಾಯ್ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ.

ಹನುಮಾನ್​ ಚಿತ್ರದ ಮೂಲಕ ಖ್ಯಾತಿಗಳಿಸಿರುವ ನಟ ತೇಜಾ ಸಜ್ಜಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಶ್ವ ಪ್ರಸಾದ್​, ಕೃತಿ ಪ್ರಸಾದ್​ ಮತ್ತು ವಿವೇಕ್​​​ ಕುಚಿಬೋಟ್ಲಾ ಮಿರಾಯ್ ಚಿತ್ರ ನಿರ್ಮಾಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net