ಜಾತ್ರೆಯಲ್ಲಿ ವಸ್ತುಗಳನ್ನು ಖರೀದಿಸಲು ನಕಲಿ 200 ರೂ. ನೋಟನ್ನು ಬಳಸಿದ ಅಪ್ರಾಪ್ತ ವಯಸ್ಕರು; ಪೊಲೀಸರು ಮಾಡಿದ್ದೇನು?

tamilnadu
Published on

ತಮಿಳುನಾಡು: ಜಾತ್ರೆಯಲ್ಲಿ ತಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸಲು 200 ರೂ. ಮುಖಬೆಲೆಯ ನಕಲಿ ನೋಟನ್ನು(Fake Currency Notes) ಬಳಸಿದ ಮೂವರು ಅಪ್ರಾಪ್ತರನ್ನು(Minors) ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ(Tamilnadu) ನಾಗಪಟ್ಟಣಂ ಜಿಲ್ಲೆಯಲ್ಲಿ 200 ರೂ. ನಕಲಿ ನೋಟುಗಳನ್ನು ಐಸ್ ಕ್ರೀಮ್ ಸೇರಿದಂತೆ ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಬಳಕೆ ಮಾಡಿದ್ದಾರೆ. ನಕಲಿ ನೋಟುಗಳನ್ನು ವ್ಯಾಪಾರಸ್ಥರಿಗೆ ಚಲಾವಣೆ ಮಾಡಿದ ಮೂವರು ಅಪ್ರಾಪ್ತರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶೀಘ್ರವೇ ಮೂವರನ್ನು ಬಂಧಿಸಿದ್ದಾರೆ.

ಮೂವರು ಸ್ನೇಹಿತರು ಜತೆಗೂಡಿ ಈ ಕೆಲಸ ಮಾಡಿದ್ದು, 200 ರೂಪಾಯಿ ಮುಖಬೆಲೆಯ 32,000 ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಅಪ್ರಾಪ್ತರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ಅಪರಾಧಿಗಳಲ್ಲಿ ಒಬ್ಬನು ತನಗೆ ರಜೆ ಸಿಕ್ಕ ಸಮಯದಲ್ಲಿ ತನ್ನ ಚಿಕ್ಕಪ್ಪನ ಫೋಟೋಕಾಪಿ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಅವನು 200 ರೂ. ನೋಟುಗಳನ್ನು ಮುದ್ರಿಸಲು ಬಣ್ಣದ ಫೋಟೋಕಾಪಿ ಯಂತ್ರವನ್ನು ಉಪಯೋಗಿಸಿಕೊಂಡಿದ್ದಾನೆ. ಆತ ತನ್ನ ಸ್ನೇಹಿತರ ಜೊತೆ ಸೇರಿ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಖರೀದಿಸಲು ಈ ನಕಲಿ ನೋಟನ್ನು ಬಳಸಿದ್ದಾನೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.

ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದ ಮೂವರು ಅಪ್ರಾಪ್ತರನ್ನು ಗಮನಿಸಿದ ಅಂಗಡಿ ಮಾಲಿಕರು, ಕೂಡಲೇ ಮೂವರನ್ನು ತಪ್ಪಿಸಿಕೊಳ್ಳದಂತೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಮಿಳುನಾಡು ಪೊಲೀಸರು ಅಪ್ರಾಪ್ತರನ್ನು ಬಂಧಿಸಿ, ಅವರು ಬಳಸಿದ ಬಣ್ಣದ ಫೋಟೋಕಾಪಿ ಯಂತ್ರಗಳು ಮತ್ತು ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net