ಮ್ಯಾಚ್​ಬಾಕ್ಸ್​ ನೀಡಲು ನಿರಾಕರಿಸಿದ ಯುವಕನನ್ನು ಇರಿದು ಕೊಂದ ಅಪ್ರಾಪ್ತ ವಯಸ್ಕರು!

Murder Crime
Published on

ಮುಂಬೈ: ಸಿಗರೇಟ್​ ಹಚ್ಚಿಕೊಳ್ಳಲು ಬೆಂಕಿ ಕಡ್ಡಿ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಅಪ್ರಾಪ್ತ ವಯಸಿನ ಹುಡುಗರು 22 ವರ್ಷದ ಯುವಕನನ್ನು ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಮಂಖುರ್ದ್​ ಪ್ರದೇಶದಲ್ಲಿ ಘಟನೆ ನಡೆದಿದ್ದು ರಂಜಾನ್ ಅಬ್ದುಲ್​​ ಹಮೀದ್ ಶೇಖ್​(22) ಎಂದು ಗುರುತಿಸಲಾಗಿದೆ.

ಬೆಂಕಿ ಕಡ್ಡಿ ನೀಡದ್ದಕ್ಕೆ ಕೊಲೆ

ಘಟನೆ ಸೋಮವಾರ ಸಂಜೆ ಮಂಖುರ್ದ್​ ಪ್ರದೇಶದಲ್ಲಿ ನಡೆದಿದ್ದು ಹಮೀದ್​ ಬಳಿ ಇಬ್ಬರು ಅಪ್ರಾಪ್ತ ವಯಸಿನ ಹುಡುಗರು ಬಂದು ಸಿಗರೇಟ್​ ಹಚ್ಚಿಕೊಳ್ಳಲು ಮ್ಯಾಚ್​ ಬಾಕ್ಸ್​ ಕೇಳಿದ್ದಾರೆ.

ಈ ವೇಳೆ ಬಾಲಕರಿಬ್ಬರಿಗೆ ಹಮೀದ್​ ಮ್ಯಾಚ್​ ಬಾಕ್ಸ್​ ನೀಡಲು ನಿರಾಕರಿಸಿದ್ಧಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅಪ್ರಾಪ್ತ ವಯಸಿನ ಹುಡುಗರಿಬ್ಬರು ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

​ಪ್ರಕರಣ ಸಂಬಂಧ ಮೃತನ ತಾಯಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಅಪ್ರಾಪ್ತ ವಯಸಿನ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಬಂಧನ

ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಸಿಗರೇಟ್​ ಹಚ್ಚಿಕೊಳ್ಳಲು ಮೃತ ಯುವಕನ ಬಳಿ ಅಪ್ರಾಪ್ತ ವಯಸ್ಕರು ಬಂದು ಮ್ಯಾಚ್​ಬಾಕ್ಸ್​ ಕೇಳಿದ್ದಾರೆ. ಈ ವೇಳೆ ಹಮೀದ್​ ಬಾಲಕರಿಗೆ ಕೊಡುವುದಿಲ್ಲ ಎಂದು ಹೇಳಿ ನಿಂದಿಸಿದ್ದಾನೆ.

ಸಿಟ್ಟಿಗೆದ್ದ ಬಾಲಕರಿಬ್ಬರು ಹಮೀದ್​ಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ ಅಪ್ರಾಪ್ತ ವಯಸ್ಕರು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಸ್ಥಳ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸ್ಥಳೀಯರನ್ನು ವಿಚಾರಿಸಿದಾಗ ಬಾಲಕರ ಬಗ್ಗೆ ತಿಳಿದು ಬಂದಿದ್ದು ಅವರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net