ಒಬ್ಬನೇ ಇರ್ತಿದ್ದ, ಮೊಬೈಲ್​ಫೋನ್​ ಗೀಳು ಹೊಂದಿದ್ದ ಬಾಲಕ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಮಾಡಿ ಕೊಂದ!

Pub crime
Published on

ಕಲಬುರಗಿ: ಒಬ್ಬಂಟಿಯಾಗಿ ಇರುತ್ತಿದ್ದುದಲ್ಲದೆ ಮೊಬೈಲ್​ಫೋನ್​ ಗೀಳು ಕೂಡ ಹೊಂದಿದ್ದ ಬಾಲಕನೊಬ್ಬ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ್ದಾನೆ. ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಈ ಪ್ರಕರಣ ನಡೆದಿದೆ.

ಅಪ್ರಾಪ್ತ ವಯಸ್ಸಿನವಳ ಮೇಲೆ ಅದೇ ಗ್ರಾಮದ 16 ವರ್ಷದ ಬಾಲಕ ಅತ್ಯಾಚಾರ ನಡೆಸಿ ಸಾಯಿಸಿದ್ದು, ಪ್ರಕರಣ ನಡೆದ 24 ಗಂಟೆಗಳ ಒಳಗೆ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಸದಾ ಏಕಾಂತವಾಗಿರುತ್ತಿದ್ದ ಈತ ಮೊಬೈಲ್​ಫೋನ್ ಗೀಳನ್ನು ಹೊಂದಿದ್ದು, ನಶೆಯಲ್ಲಿದ್ದಾಗ ಈ ಕೃತ್ಯವೆಸಗಿ ಪರಾರಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಹಾಗೂ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಮೊಂಬತ್ತಿ ಜಾಥಾ ನಡೆಸಿ ಸಂತಾಪ ಸೂಚಿಸಿದರು. ಅಲ್ಲದೆ ಅತ್ಯಾಚಾರಿಗಳನ್ನು ಬಂಧಿಸಿ, ಕಠಿಣ ಕಾನೂನುಕ್ರಮಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದರು. ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net