ಹೂವಿನ ವ್ಯಾಪಾರಿಯನ್ನು ಅಮಾನುಷವಾಗಿ ಥಳಿಸಿದ Minister ಸಂಬಂಧಿ; ವಿಡಿಯೋ ವೈರಲ್ ಆಗುತ್ತಿದ್ದಂತೆ ದೂರು-ಪ್ರತಿದೂರು ದಾಖಲು

Assault Video
Published on

ಮೀರತ್: ಸಚಿವರ (Minister) ಸಂಬಂಧಿಯೊಬ್ಬರು ಹೂವಿನ ವ್ಯಾಪಾರಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ದರ್ಪ ಮೆರೆದಿರುವ ಘಟನೆ ಉತ್ತರಪ್ರದೇಶದ ಮೀರತ್​ನಲ್ಲಿ ನಡೆದಿದೆ. ಉತ್ತರಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಸೋಮೇಂದ್ರ ತೋಮರ್ ಅವರ ಸಂಬಂಧಿ ನರೇಂದ್ರ ತೋಮರ್ ಹೂವಿನ ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದು, ಸದ್ಯ ಈ ಘಟನೆ ಚರ್ಚೆಗೀಡು ಮಾಡಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮೀರತ್​ನ ಜನನಿಬಿಡ ಪ್ರದೇಶದಲ್ಲಿ ಸಚಿವರ ಸಂಬಂಧಿ ಕಾರು ಚಲಾಯಿಸಿಕೊಂಡಿದ್ದು, ಹೂವಿನ ಮಾರ್ಕೆಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಹೂವಿನ ಅಂಗಡಿಯವರೊಬ್ಬರು ಸಚಿವರ ಸಂಬಂಧಿ ಹಾಗೂ ಆಟೋಗೆ ಒಂದು ಕ್ಷಣ ನಿಲ್ಲಿಸುವಂತೆ ಸೂಚಿಸಿದ್ದಾರೆ.

ಈ ವೇಳೆ ಸಚಿವರ ಸಂಬಂಧಿ ಆಟೋದವರಿಗೆ ಮುಂದೆ ಬರುವಂತೆ ಹೇಳಿದ್ದು, ಈ ವಿಚಾರವಾಗಿ ಹೂವಿನ ವ್ಯಾಪಾರಿ ಹಾಗೂ ನರೇಂದ್ರ ತೋಮರ್ ನಡುವೆ ಮಾತಿನ ಚಕಮಕಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಹೊಡೆದಾಡಿಕೊಳ್ಳಲು ಶುರು ಮಾಡಿದ್ದು, ಗನ್​ಮ್ಯಾನ್ ಇಬ್ಬರು ಜಗಳವನ್ನು ಬಿಡಿಸುತ್ತಿರುವುದನ್ನು ನೋಡಬಹುದಾಗಿದೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಅನೇಕರು ಸಚಿವರ ಸಂಬಂಧಿ ಮಾಡಿದ್ದು ಸರಿ ಎಂದು ಹೇಳಿದರೆ. ಮತ್ತಷ್ಟು ಜನ ಹೂವಿನ ವ್ಯಾಪಾರಿ ಮಾಡಿದ್ದು ಎಂದು ಸರಿ ಎಂದು ಕಮೆಂಟ್ ಹಾಕುತ್ತಿದ್ದಾರೆ. ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net