ನಟ ಸೃಜನ್​ ಲೋಕೇಶ್​ರ ಬೆಂಬಲಿಗರ ಮೇಲೆ ಸಚಿವ ಸೋಮಣ್ಣ ಪುತ್ರನ ಬೆಂಬಲಿಗರಿಂದ​ ದಾಂಧಲೆ?

srujan lokesh somanna son aruna
Published on

ಬೆಂಗಳೂರು: ನಗರದ ಪ್ರತಿಷ್ಠಿತ ಕ್ಲಬ್​ವೊಂದರಲ್ಲಿ ನಟ ಸೃಜನ್​ ಲೋಕೇಶ್​ರ ಬೆಂಬಲಿಗರ ಮೇಲೆ ಸಚಿವ ವಿ.ಸೋಮಣ್ಣ ಅವರ ಪುತ್ರನ ಗ್ಯಾಂಗ್​ ದಾಂಧಲೆ ನಡೆಸಿದೆ. ಮಧ್ಯಪ್ರವೇಶಿಸಿದ ಸೋಮಣ್ಣ, ಮಾತುಕತೆ ನಡೆಸಿ ಗಲಾಟೆಯನ್ನ ನಿಲ್ಲಿಸಿದ್ದಾರೆ. ದೂರು ಕೊಡದಂತೆ ಒತ್ತಡ ಹಾಕಿದ್ದು, ಕ್ಲಬ್​ನ ಸಿಸಿಟಿವಿ ಫೂಟೇಜ್​ ಅನ್ನೂ ಡಿಲೀಟ್​ ಮಾಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಆದರೆ ಈ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್​, 'ಇದೊಂದು ರಾಜಕೀಯ ವಿರೋಧಿಗಳ ತಂತ್ರ, ಕಾಂಗ್ರೆಸ್​ನ ಪ್ರಿಯಕೃಷ್ಣ ಮತ್ತು ಇವರ ತಂದೆ ಕೃಷ್ಣಪ್ಪ ಅವರ ಪೂರ್ವ ನಿಯೋಜಿತ ತಂತ್ರ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಅಂದು ಗಲಾಟೆಯೇ ನಡೆದಿಲ್ಲ. ಆ ಗಲಾಟೆ ವಿಷ್ಯಕ್ಕೂ ನನನೂ ಯಾವುದೇ ಸಂಬಂಧ ಇಲ್ಲ. ನಾನು ಅಲ್ಲಿಗೆ ಹೋಗಿಯೇ ಇಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ತಂದೆಯ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಸೃಜನ್​ರನ್ನು ನಾನು ಅಂದು ಭೇಟಿಯೇ ಮಾಡಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿರೋಧಿಗಳು ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net