

ಹಾವೇರಿ: ರಾಜ್ಯ ರಾಜಕಾರಣದಲ್ಲಿ ದಿನ ಕಳೆದಂತೆ ವಕ್ಛ್ ವಿವಾದ ತಾರಕಕ್ಕೇರುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನೂ ರೈತರ ಜಮೀನು ವಕ್ಛ್ ಆಸ್ತಿ ಎಂದು ಪಹಣಿಯಲ್ಲಿ ಪ್ರಿಂಟ್ ಆಗುತ್ತಿರುವುದು ಮತ್ತು ನೋಟಿಸ್ ಜಾರಿ ಮಾಡುತ್ತಿರುವ ಕ್ರಮ ಉಪಚುನಾವಣೆಯ ಸಮಯದಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಗದ್ದಲವನ್ನೇ ಎಬ್ಬಿಸಿದ್ದು ಇದೀಗ ಸಕ್ಕರೆ ಸಚಿವ ಶಿವಾನಂದ ಪಾಟೀಲ್ (Shivanand Patil) ನೀಡಿರುವ ಹೇಳಿಕೆ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವುದು ಖಾತ್ರಿಯಾಗಿದೆ.
ಸವಣೂರು ತಾಲ್ಲೂಕಿನ ಕಡಕೋಳದಲ್ಲಿ ವಕ್ಛ್ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು (Shivanand Patil), ಕಡಕೋಳ ಪ್ರಕರಣ ಸುದ್ದಿಯಾಗುವಂತದಲ್ಲ. ಕಡಕೋಳ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿರಲಿಲ್ಲ. ಕಡಕೋಳದಲ್ಲಿ ಒಂದು ಎಂಟ್ರಿ ಆಗಿಲ್ಲ. ಹಾವೇರಿ ಜಿಲ್ಲೆಯಲ್ಲಿ ಎಂಟ್ರಿ ಆಗಿರಬಹುದು. ಆದರೆ ಕಡಕೋಳದಲ್ಲಿ ಒಂದೇ ಒಂದು ಎಂಟ್ರಿ ಆಗಿಲ್ಲ. ಅಲ್ಲಿ ಯಾವುದೂ ವಕ್ಪ್ ಅಂತ ಇನ್ನೂ ಎಂಟ್ರಿನೇ ಆಗಿಲ್ಲ. ಆದರೂ ಸುಮ್ಮನೆ ಸಮಸ್ಯೆ ಮಾಡುತ್ತೀರಿ ಅಂದರೆ ಎಂಥ ಮೂರ್ಖತನ.
ನೋಟಿಸ್ ಕೊಟ್ಟರೆ ಎಂಟ್ರಿ ಆದ ಹಾಗೆ ಅಲ್ಲ. ಕಡಕೋಳದಲ್ಲಿ ಗಲಾಟೆ ಆಗಿರುವುದು ದುರಾದೃಷ್ಟಕರ. ಪಾಪ ಮುಸಲ್ಮಾನರನ್ನು ರಾತ್ರಿ ಒಕ್ಕಲೆಬ್ಬಿಸಿ ಮನೆಯಿಂದ ಓಡಿಸಿದಾರೆ. ಅವರು ಇನ್ನೂ ಊರಿಗೆ ಬಂದಿಲ್ಲ. ಬಹು ಸಂಖ್ಯಾತ ಹಿಂದುಗಳಿದ್ದರೆ ಮುಸ್ಲಿಂರಿಗೆ ಭಯ. ಮುಸಲ್ಮಾನರು ಬಹುಸಂಖ್ಯಾತರಿದ್ದಲ್ಲಿ ಹಿಂದೂಗಳಿಗೆ ಭಯ. ಈ ರೀತಿ ವಾತಾವರಣ ಸೃಷ್ಟಿ ಮಾಡುತ್ತಾ ಬರುತ್ತಿದ್ದಾರೆ. ಇದು ಬಹಳ ದುರದೃಷ್ಟಕರ. ಕಡಕೋಳದಲ್ಲಿ ಉಂಟಾದ ಸಂಘರ್ಷದ ಸಂಬಂಧ ನಾನೇ ಹಿಂದೂಗಳನ್ನು ಅರೆಸ್ಟ್ ಮಾಡಿ ಬಿಡುಗಡೆ ಮಾಡಿ ಅಂತ ಪೊಲೀಸರಿಗೆ ಹೇಳಿದ್ದೆ ಎಂದು ಹೇಳಿದ್ದಾರೆ.
ವಕ್ಪ್ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಹೇಳಿರುವ ವಿಡಿಯೋ ಇದೆ ನೋಡಿದೆ. ಚುನಾವಣೆ ಸಂದರ್ಭದಲ್ಲಿ ಅಸ್ತ್ರ ಹುಟ್ಟಿಸ್ತಾರೆ, ಅವರ ನೂರು ಪಟ್ಟು ಮೀಡಿಯಾದವರು ಹುಟ್ಟಿಸ್ತಿರಿ. ವಕ್ಪ್ ಅಂತ ಎಂಟ್ರಿ ಆದರೆ ಟ್ರಿಬ್ಯುಬಲ್ ಇದೆ, ಅಲ್ಲಿ ಅಪೀಲ್ ಹಾಕಿದರೆ ಎಂಟ್ರಿ ಆಗಿರೋದು ಡಿಲೇಟ್ ಆಗುತ್ತೆ. ಕೇಂದ್ರದಲ್ಲಿ ವಕ್ಪ್ ಕಾನೂನು ಮರು ಪರಿಶೀಲನೆ ಮಾಡಲು ಹೋದಾಗ ಆ ಸಮಾಜದವರು ಒಂದು ಚಿಂತನೆಗೆ ಹೋಗಿರಬಹುದು. ಮುಸ್ಲಿಂ ರಾಜರು ಹಿಂದೂ ಮಠಗಳಿಗೂ ಆಸ್ತಿ ಕೊಟ್ಟಿದಾರೆ. ಅವೆಲ್ಲಾ ಸಿವಿಲ್ ಡಿಸ್ಪ್ಯೂಟ್. ಆದರೆ ಅದನ್ನು ಸಾರ್ವಜನಿಕವಾಗಿ ಬೀದಿ ನ್ಯಾಯ ಮಾಡಿದರು. ನಮ್ಮ ವರ್ಷನ್ ಹೇಳ್ತೀನಿ ಕೇಳಿ. ವಕ್ಪ್ ಆಸ್ತಿನೂ ಪರಿಶೀಲನೆ ಮಾಡಿದಾರೆ. ಗುಡಿ ಗುಂಡಾರಗಳ ಆಸ್ತಿನೂ ಪರಿಶೀಲನೆ ಮಾಡಿದ್ದಾರೆ. ಅದಕ್ಕೆಲ್ಲಾ ಕೋರ್ಟ್ ಇದೆ ಎಂದು ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿದ್ದಾರೆ.