VIDEO| ಡಾನ್ಸ್​ ಮಾಡುತ್ತ ಖುಷಿಪಟ್ಟ ಸಚಿವೆ ಶಶಿಕಲಾ ಜೊಲ್ಲೆ!

shashikala jolle dance 1
Published on

ಹುಬ್ಬಳ್ಳಿ: 'ಆಪ್ತಮಿತ್ರ' ಸಿನಿಮಾದ ಪಟ ಪಟ ಹಾರೋ ಗಾಳಿಪಟ... ಹಾಡಿಗೆ ಸಚಿವೆ ಶಶಿಕಲಾ ಜೊಲ್ಲೆ ಮಸ್ತ್ ಡಾನ್ಸ್​ ಮಾಡಿರುವ ದೃಶ್ಯ ವೈರಲ್​ ಆಗಿದೆ. ಮನೋವಿಕಲ ಹಾಗೂ ವಿಶೇಷ ಚೇತನ ಮಕ್ಕಳೊಂದಿಗೆ ಬುಧವಾರ ಬರ್ತ್ ಡೇ ಆಚರಿಸಿಕೊಂಡ ಸಚಿವೆ, ರಾತ್ರಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಹಾಡು-ಕುಣಿತ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಸಚಿವೆ ಮಕ್ಕಳೊಂದಿಗೆ ಮಕ್ಕಳಾಗಿ ಕೆಲಕಾಲ ನಲಿದಾಡಿದರು. ಈ ವೇಳೆ ಮಕ್ಕಳೊಂದಿಗೆ 'ಪಟ ಪಟ ಹಾರೋ ಗಾಳಿಪಟ..' ಹಾಡಿಗೂ ಹೆಜ್ಜೆ ಹಾಕಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಣಕಲ್ಲಿನ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net