ರಾಜ್ಯಪಾಲರ ವಿರುದ್ಧ ಮತ್ತೆ ಹರಿಹಾಯ್ದ ಸಚಿವ ಪ್ರಿಯಾಂಕ್ ಖರ್ಗೆ| Governor

Priyank
ಪ್ರಿಯಾಂಕ್ ಖರ್ಗೆ, ಸಚಿವ
Published on

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯಪಾಲರ ನಡುವಿನ ಮುನಿಸು(Minister Priyank Kharge lashes out against Governor again) ಮತ್ತಷ್ಟು ತಾರಕ್ಕೇರಿದೆ.

ಗದಗದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ತಕ್ಷಣವೇ ಅರ್ಜಿಗಳನ್ನು ಕರೆಯಲು ರಾಜ್ಯಪಾಲರು ನೇರವಾಗಿ ಸಿಎಂಗೆ ಪತ್ರ ಬರೆದ ಬೆನ್ನಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

ರಾಜ್ಯಪಾಲರ ವಿರುದ್ಧ ಪ್ರಿಯಾಂಕ್ ಖರ್ಗೆ ಮತ್ತೆ ಹರಿಹಾಯ್ದಿದ್ದಾರೆ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಧೇಯಕಕ್ಕೆ ಅಂಕಿತ ಹಾಕುವ ವಿಚಾರದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸದನದ ಪಾಸ್ ಮಾಡಿರುವ ವಿಧೇಯಕಗಳಿಗೆ ಕಿಮ್ಮತ್ತು ಇಲ್ವಾ? ವಿಧೇಯಕ ಮಾಡಿದ್ದೇವೆ ಆದರೂ ರಾಜ್ಯಪಾಲರು ನನ್ನದೆ ನಡೆಯಬೇಕು ಅಂದರೆ ಹೇಗೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನಾವೇನೂ ಹೊಸದನ್ನು ಮಾಡುತ್ತಿಲ್ಲ. ಬರೋಡ, ಯುಪಿನಲ್ಲಿ ಇರುವುದನ್ನೇ ಮಾಡಿದ್ದೇವೆ ಎಂದು ಟಾಂಗ್ ಕೊಟ್ಟಿದ್ದಾರೆ. ರಾಜ್ಯಪಾಲರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ನಮಗೆ ಪಾಠ ಹೇಳುವ ಅವಶ್ಯಕತೆ ಇಲ್ಲ. ರಾಜ್ಯಪಾಲರ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದರು.

ಕೋವಿಡ್ ಯಾರೂ ತಪ್ಪಿಸಿಕೊಳ್ಳುವಂತಿಲ್ಲ

ಕೋವಿಡ್ ಹಗರಣದ ವಿಚಾರದಲ್ಲಿ ಉನ್ನತ ಅಧಿಕಾರಿ ಇರಲಿ, ರಾಜಕಾರಣಿ ಇರಲಿ ಯಾರು ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.

ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕುರಿತ ಪ್ರಶ್ನೆಗೆ, ಮಂಥರಗೌಡ ಪೊನ್ನಣ್ಣ ಹೆಸರಿದೆಯಾ? ಡೆತ್‌ನೋಟ್‌ನಲ್ಲಿ ಹೆಸರಿದೆಯಾ? ಬೀದರ್‌ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಾಗ ನನ್ನ ಹೆಸರಿತ್ತಾ? ಪ್ರತಿಭಟನೆ ಮಾಡಿದ ಬಿಜೆಪಿಯವರು ಸದನದಲ್ಲಿ ಪ್ರಶ್ನೆ ಮಾಡಿದರೆ? ಬಿಜೆಪಿಯವರು ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಾರೆ. ಎಷ್ಟು ಜನ ಕಾರ್ಯಕರ್ತರಿಗೆ ಸಹಾಯ ಮಾಡಿದ್ದಾರೆ? ಎಂದು ಪ್ರಿಯಾಂಕ್ ಖರ್ಗೆ ಕೆಣಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net