

ಶಿವಮೊಗ್ಗ: ಸೊರಬ ತಾಲೂಕಿನ ಕುಬಟೂರಿನಲ್ಲಿ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ 16 ಅಡಿ ಎತ್ತರದ ಗಣೇಶ ಮೂರ್ತಿಗೆ ಸಚಿವ ಮಧು ಬಂಗಾರಪ್ಪ ಪೂಜೆ ಸಲ್ಲಿಸಿದರು.
ಬೆಂಗಳೂರಿನಿಂದ ಗಣೇಶನ ಮೂರ್ತಿಯನ್ನು ಬರಮಾಡಿಕೊಂಡಿದ್ದು, ಸೊರಬ ತಾಲೂಕಿನಲ್ಲೇ ಅತೀ ಎತ್ತರದ ಮೂರ್ತಿ ಇದಾಗಿದೆ. ಗಣಪ ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದು, ಆಕರ್ಷಕವಾದ ಮಂಟಪದಲ್ಲಿ ರಾಜಗಾಂಭೀರ್ಯದಿಂದ ಸಿಂಹಾಸನದ ಮೇಲೆ ಕೂತು ವಿವಿಧ ಕಲಾಕೃತಿಗಳಿಂದ ಕಂಗೊಳಿಸುತ್ತಿರುವ ಗಣೇಶನನ್ನು ನೋಡಲು ಅಕ್ಕ-ಪಕ್ಕದ ತಾಲೂಕು ಹಾಗೂ ಗ್ರಾಮಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.
ಸೆ.12ರಂದು ಅನ್ನ ಸಂತರ್ಪಣಾ ಕಾರ್ಯಕ್ರಮ ಆಯೋಜಿಸಿದ್ದು, 13ರಂದು ವಿವಿಧ ಸಾಂಸ್ಕೃತಿಕ ಮೆರವಣಿಗೆಗಳೊಂದಿಗೆ ಕುಬಟೂರು ಮಹಾರಾಜ ಗಣಪತಿ ವಿಸರ್ಜನೆ ನೆರವೇರಲಿದೆ.