

ಬೆಂಗಳೂರು: ಖಾತೆ ಹಂಚಿಕೆ ಅದಲು-ಬದಲು ವಿಚಾರವಾಗಿ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಖಾತೆ ಅದಲು-ಬದಲು ಮಾಡುವುದು ಸಿಎಂ ಪರಮಾಧಿಕಾರ. ಅವರ ತಂಡದಲ್ಲಿ ಯಾರು ಇರಬೇಕು? ಯಾರಿಗೆ? ಯಾವ ಸ್ಥಾನ ಕೊಡಬೇಕು? ಎಂಬುದು ಸಿಎಂ ವಿವೇಚನೆಗೆ ಬಿಟ್ಟಿದ್ದು, ಖಾತೆ ಬದಲಾವಣೆ ಬಗ್ಗೆ ಸಿಎಂ ನನ್ನ ಜತೆ ಮಾತನಾಡಿಲ್ಲ, ನಾನು ಅವರ ಜತೆ ಮಾತನಾಡಿಲ್ಲ ಎಂದರು.
ಮುಂದುವರಿದು ಸಂಜೆ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಕೇಂದ್ರ ಸಚಿವರ ಕಾರ್ಯಕ್ರಮ ನಮ್ಮ ಕ್ಷೇತ್ರದಲ್ಲಿ ಇದೆ. ಅದರ ತಯಾರಿ ಮಾಡಬೇಕಿದೆ. ಹೀಗಾಗಿ ಸಚಿವ ಸಂಪುಟ ಸಭೆಗೆ ಹೋಗಬೇಕೆ? ಬೇಡವೆ? ಎಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.
ಅಂದಹಾಗೆ ರೈತರ ಜತೆ ಇರಬಹುದಾದ ಖಾತೆ(ಸಣ್ಣ ನೀರಾವರಿ) ಬದಲಾವಣೆಗೆ ಜೆ.ಸಿ.ಮಾಧುಸ್ವಾಮಿ ಆಕ್ರೋಶಗೊಂಡು ತಮ್ಮ ರಾಜೀನಾಮೆ ಪತ್ರವನ್ನು ಆಪ್ತ ಸಹಾಯಕನಿಗೆ ನೀಡಿ ಜೆಸಿ ಪುರಕ್ಕೆ ವಾಪಸಾಗಿದ್ದಾರೆಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್)