ದಾದಿಯರ ಸೇವೆಗೆ ಹೆಚ್ಚಿನ ಮನ್ನಣೆ ಸಿಗಬೇಕು: ದಿನೇಶ್ ಗುಂಡೂರಾವ್

Sudhee_12_22nd_Florence_Nightingale_Award_@_Banquet Hall (2)
Published on

ಬೆಂಗಳೂರು:
ರೋಗಿಗಳ ಸೇವೆಯನ್ನು ಮಾಡುವ ದಾದಿಯರ ಸೇವೆ ಪುಣ್ಯದ ಕೆಲಸ. ಅವರ ಸೇವೆಯನ್ನು ಗುರುತಿಸಿ ಪುರಸ್ಕರಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ್ಲಾರೆನ್ಸ್ ನೈಟಿಂಗೇಲ್ ಆವಾರ್ಡ್ ಕಾರ್ಯಕ್ರಮದಲ್ಲಿ ದಾದಿಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಮಾಜದಲ್ಲಿ ವೈದ್ಯರಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ. ಆದರೆ, ರೋಗಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ನಿಜವಾದ ಸೇವೆ ಸಲ್ಲಿಸುವ ದಾದಿಯರಿಗೆ ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಸಮಾಜದಲ್ಲಿ ಮನ್ನಣೆ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ದಾದಿಯರ ಸೇವೆಯನ್ನು ಗುರುತಿಸಿ ಜಗತ್ತಿನ ನಾನಾ ಕಡೆಯಲ್ಲಿ ್ಲಾರೆನ್ಸ್ ನೈಟಿಂಗೇಲ್ ಆವಾರ್ಡ್ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆ ಮೂಲಕ ಆರೋಗ್ಯ ಇಲಾಖೆಯಲ್ಲಿಯೂ ಆಂಗ್ಲೋ ಇಂಡಿಯನ್ ಯುನಿಟಿ ಸೆಂಟರ್ ಮೂಲಕ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಕೆಲಸ ಎಂದರು.
ರಾಜ್ಯದಲ್ಲಿ 618 ನರ್ಸಿಂಗ್ ಕಾಲೇಜು, 900 ಡಿಪ್ಲೊಮೊ ಕಾಲೇಜುಗಳಿದ್ದು, ಆ ಮೂಲಕ ದಾದಿಯರು ಹೊರ ಬರುತ್ತಿದ್ದಾರೆ. ಅವರಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಲಭ್ಯವಾಗುತ್ತಿದೆ. ದಾದಿಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ದವಾಗಿದೆ ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳು ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ, ಅವರ ಪರವಾಗಿ ನಾನೇ ನಿಂತು ನಿಮ್ಮ ಬೇಡಿಕೆಗಳನ್ನು ಮನದಟ್ಟು ಮಾಡಿಕೊಡಲಾಗುವುದು. ಹಂತ ಹಂತವಾಗಿ ಎಲ್ಲವನ್ನೂ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಣದೀಪ್, ನಿರ್ದೇಶಕ ಡಾ.ಶ್ರೀನಿವಾಸ್.ಜಿ.ಎನ್.,ಡಾ.ಮಲ್ಲು, ಡಾ.ವಾಸುದೇವ್, ಡಾ.ಕ್ಲೆಮೆಂಟ್, ಮಾಜಿ ಮೇಯರ್ ಸಂಪತ್ ರಾಜ್ ಮತ್ತಿತರರು ಇದ್ದರು. ್ಲಾರೆನ್ಸ್ ನೈಟಿಂಗೇಲ್ ಅವಾರ್ಡ್ ಕಮಿಟಿ ಅಧ್ಯಕ್ಷ ಐವಾನ್ ನಿಗ್ಲಿ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net