ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಯಾಕೆ?: ಮಾಜಿ ಸಿಎಂ ಬೊಮ್ಮಾಯಿಗೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು

bommai and dinesh
Published on

ಬೆಂಗಳೂರು: ಅನ್ನ ಭಾಗ್ಯದ ಅಕ್ಕಿಯ ಮೊದಲ ತುತ್ತಿನಲ್ಲೇ ಕಲ್ಲು ಎಂದು ಟೀಕಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಯಾಕೆ? ಎಂದು ಸಚಿವ ದಿನೇಶ್​ ಗುಂಡೂರಾವ್​ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಯಾರಿಗೂ ಭಾರವಾಗಬಾರದೆಂದು 15 ವರ್ಷದ ಹಿಂದೆ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಿದ್ದ ವೃದ್ಧ ಸಾವು

ಬೊಮ್ಮಾಯಿಯವರೆ ನಿಮ್ಮ ಹೊಟ್ಟೆಯೊಳಗಿನ ಸಂಕಟ ಮತ್ತು ಬೇಗುದಿ ಏನೆಂದು ಅರ್ಥವಾಗುತ್ತಿಲ್ಲ. ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಎಂದು ಆಕಾಶ ಭೂಮಿ ಒಂದಾಗುವಂತೆ ನೀವು ಮತ್ತು ನಿಮ್ಮ ಪಕ್ಷದವರು ಹಿಂದೆ ಹೇಳಿದ್ದೀರಿ. ಈಗ ಅಕ್ಕಿ ಬದಲು ನಾವು ಹಣ ಕೊಟ್ಟರೆ ಆ ವಿಷಯದಲ್ಲೂ ಹುಳುಕು‌ ಹುಡುಕುತ್ತಿದ್ದೀರಿ, ಈ ನಿಮ್ಮ ರೋಗಕ್ಕೆ ಮದ್ದೆಲ್ಲಿಂದ ತರುವುದು ಎಂದು ಸಚಿವರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ನಾವು ದುಡ್ಡು ಕೊಡುತ್ತೇವೆ ಎಂದರೂ ಅಕ್ಕಿಯನ್ನು ಕೊಡಲಿಲ್ಲ. ಕೇಂದ್ರಕ್ಕೆ ಕೊಡುವ ದುಡ್ಡನ್ನು ನಾವು ಈಗ ಜನರಿಗೆ ಕೊಡುತ್ತಿದ್ದೇವೆ. ಬಿಜೆಪಿಯವರಿಗೆ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡುವುದು ಇಷ್ಟವಿಲ್ಲ, ಹಾಗಾಗಿ ನಮಗೆ ಅಕ್ಕಿ ಸಿಗದಂತೆ ಮಾಡಿದ್ದೀರಿ. ನಾವು ಅಕ್ಕಿ ಬದಲಾಗಿ ಜನರಿಗೆ ದುಡ್ಡು ಕೊಡುತ್ತಿರುವುದನ್ನು ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಗುಣಕ್ಕೆ ಎಂದಿಗೂ ಮತ್ಸರವಿರಬಾರದು, ಅದೇ ರೀತಿ ಯಾರಾದರೂ ಜನರಿಗೆ ಒಳ್ಳೆಯದನ್ನು ಮಾಡುತ್ತಿದ್ದರೆ ಅವರು ನಿಮ್ಮ ಶತ್ರುಗಳಾದರೂ ಅವರ ಮೇಲೆ ಮತ್ಸರವಿರಬಾರದುನ ಎಂದು ಗುಂಡುರಾವ್​ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಜಲಜೀವನ್ ಯೋಜನೆಯಲ್ಲಿ ಅವ್ಯವಹಾರದ ಸದ್ದು: ಜಿಪಂ ಸಿಇಒಗೆ ತನಿಖೆಯ ಹೊಣೆ
 
ನೀವು ಅಧಿಕಾರದಲ್ಲಿದ್ದಾಗ ಜನರಿಗೆ ಒಳ್ಳೆಯದನ್ನು ಮಾಡಲಿಲ್ಲ. ನಿಮ್ಮ ಕೈಲಾಗದೇ ಇರುವುದನ್ನು ನಾವು ಮಾಡುತ್ತಿರುವುದನ್ನು ಕಂಡು ನಿಮಗೆ ಹೊಟ್ಟೆಕಿಚ್ಚು ಶುರುವಾಗಿದೆ. ಮೊಸರಿನಲ್ಲಿ ಕಲ್ಲು ಹುಡುಕುವ ಬುದ್ಧಿ ಬೇಡ ಎಂದು ಸಚಿವರು ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net