ಮದ್ಯಪಾನಕ್ಕೆ ಕನಿಷ್ಠ ವಯಸ್ಸು ಇಳಿಕೆ?

liquor
Published on

ನವದೆಹಲಿ: ಅಬಕಾರಿ ಆದಾಯ ಹೆಚ್ಚಿಸುವ ಮಾರ್ಗಗಳನ್ನು ಸೂಚಿಸಲು ದೆಹಲಿ ಸರ್ಕಾರ ರಚಿಸಿದ್ದ ಸಮಿತಿಯು, ಮದ್ಯಪಾನ ಮಾಡಲು ಇರುವ ಕಾನೂನುಬದ್ಧ ವಯಸ್ಸನ್ನು ದೆಹಲಿಯಲ್ಲಿ 25 ವರ್ಷದಿಂದ 21 ವರ್ಷಕ್ಕೆ ಇಳಿಸಬೇಕು ಮತ್ತು ಮದ್ಯ ದೊರೆಯದಿರುವ ದಿನಗಳ ಸಂಖ್ಯೆಯನ್ನು ವರ್ಷಕ್ಕೆ ಮೂರಕ್ಕೆ ಇಳಿಕೆ ಮಾಡಬೇಕು ಎಂದು ಸಲಹೆ ನೀಡಿದೆ.

ಡಿಪಾರ್ಟ್ಮೆಂಟ್ ಸ್ಟೋರ್​ಗಳಿಗೆ ಬಿಯರ್ ಮತ್ತು ವೈನ್ ಮಾರಾಟ ಮಾಡಲು ಅನುಮತಿ ನೀಡಬೇಕು, ದೆಹಲಿಯಾದ್ಯಂತ ಸರ್ಕಾರ ನಡೆಸುವ ಮದ್ಯದಂಗಡಿಗಳಿಗೆ ಸರಕಿನ ಸಮನಾದ ವಿತರಣೆಯಾಗಬೇಕು ಎಂದು ಸಮಿತಿ ಸೂಚಿಸಿದೆ. ಈ ಸಲಹೆಗಳನ್ನು ಪರಿಗಣಿಸಲಾಗುತ್ತಿದ್ದು, ಇತರ ರಾಜ್ಯಗಳಂತೆ ಮದ್ಯಪಾನಕ್ಕೆ ಇರುವ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಇಳಿಸುವ ಹಾಗೂ ಗಾಂಧಿ ಜಯಂತಿ, ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವದಂದು ಮಾತ್ರ ಮದ್ಯ ಮಾರಾಟ ನಿಷೇಧಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ಪ್ರಸ್ತುತ ಎಲ್ 12 ಮತ್ತು ಎಲ್ 12-ಎಫ್ ಅಬಕಾರಿ ಪರವಾನಗಿ ಅಡಿಯಲ್ಲಿ ಬಿಯರ್ ಮತ್ತು ವೈನ್ ಮಾರಾಟ ಮಾಡುವ 125 ಡಿಪಾಟ್ಮೆಂಟ್ ಸ್ಟೋರ್​ಗಳಿವೆ. ದೆಹಲಿಯಲ್ಲಿ

ರಾಜ್ಯ ಅಬಕಾರಿ ಆದಾಯವನ್ನು ಹೆಚ್ಚಿಸುವ ಕ್ರಮಗಳನ್ನು ಸೂಚಿಸಲು ಹಣಕಾಸು ಮತ್ತು ಅಬಕಾರಿ ಖಾತೆ ಗಳನ್ನು ಹೊಂದಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೆಪ್ಟೆಂಬರ್​ನಲ್ಲಿ ಈ ಸಮಿತಿ ರಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net