‘ಮಿಂಚು ಮುರಳಿ’ ಚಿತ್ರದ ಟೀಸರ್ ಬಿಡುಗಡೆ ಮಾಡಿದ ರಾಕಿಂಗ್​ಸ್ಟಾರ್

collage (28)
Published on

ಈಗಾಗಲೇ ಬಹುಭಾಷಾ ಸಿನಿಮಾ ಪರಿಕಲ್ಪನೆ ವರ್ಕೌಟ್​ ಆಗುತ್ತಿದೆ. ಕನ್ನಡದ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿವೆ. ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಕನ್ನಡಕ್ಕೆ ಆಗಮಿಸುತ್ತಿವೆ.

ಇದೀಗ ಮಲಯಾಳಂನ ಮಿಂಚು ಮುರಳಿ ಸಿನಿಮಾ ಕನ್ನಡದ ಜತೆಗೆ ಒಟ್ಟು ಐದು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಆ ಚಿತ್ರದ ಟೀಸರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಕನ್ನಡದ ಆ ಟೀಸರ್ ಬಿಡುಗಡೆ ಮಾಡಿದ್ದು, ರಾಕಿಂಗ್​ ಸ್ಟಾರ್ ಯಶ್​.

ಮಲಯಾಳಂನಲ್ಲಿ ‘ಮಿನ್ನಾಲ್​ ಮುರಳಿ’ ಶೀರ್ಷಿಕೆಯಲ್ಲಿ ಸಿದ್ಧವಾಗಲಿರುವ ಈ ಚಿತ್ರದಲ್ಲಿ ತೋವಿನ್​ ಥಾಮಸ್​ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೂಪರ್​ ಹೀರೋ ಕಾನ್ಸೆಪ್ಟ್ನ ಈ ಚಿತ್ರವನ್ನು ಬಸಿಲ್​ ಜೋಸೆಫ್​ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ 5 ಭಾಷೆಗಳ ಟೀಸರ್ ಬಿಡುಗಡೆಯಾಗಿದೆ.

ಮಲಯಾಳಂ ಮತ್ತು ತಮಿಳಿನಲ್ಲಿ ‘ಮಿನ್ನಾಲ್​ ಮುರಳಿ’, ಕನ್ನಡಲ್ಲಿ ಮಿಂಚು ಮುರಳಿ, ತೆಲುಗಿನಲ್ಲಿ ಮೆರುಪು ಮುರಳಿ ಮತ್ತು ಹಿಂದಿಯಲ್ಲಿ ಮಿಸ್ಟರ್ ಮುರಳಿಯಾಗಿ ಸಿನಿಮಾ ತಯಾರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net