ಹಾಲಿನ ದರ ಪ್ರತಿ ಲೀಟರ್​ಗೆ 4 ರೂ. ಹೆಚ್ಚಳ! ಸಚಿವ ಸಂಪುಟ ಅಸ್ತು Milk Rate Hike

milk
Published on

ಬೆಂಗಳೂರು: ( Milk Rate Hike ) ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಗೆ  ಪ್ರಸ್ತಾಪಿಸಿದ್ದು, ಇಂದು ಕ್ಯಾಬಿನೆಟ್‌ನಲ್ಲಿ  ನಿರ್ಧಾರವಾಗಿದೆ.

ಹಾಲಿನ ದದರ ಏರಿಕೆಗೆ ಕ್ಯಾಬಿನೇಟ್​ ಅನುಮೋದನೆ ನೀಡಿದ್ದು, ನಂದಿನಿ ಹಾಲಿನ ದರ ಪ್ರತಿ ಲೀಟರ್​ಗೆ 4 ರೂ. ಏರಿಕೆಯಾಗಿದೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆಗೆ ಸರ್ಕಾರ   ಗ್ರೀನ್  ಸಿಗ್ನಲ್ ನೀಡಿದೆ. ಇದೇ ಫೆಬ್ರವರಿಯಲ್ಲಿ ಪ್ರತಿ ಲೀಟರ್​ಗೆ  2 ರೂ ಏರಿಕೆ ಮಾಡಲಾಗಿತ್ತು. ಆದ್ರೆ, ಇದೀಗ ಲೀಟರ್​ಗೆ ಬರೋಬ್ಬರಿ ನಾಲ್ಕು ರೂಪಾಯಿ ಏರಿಕೆ ಮಾಡಲಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆ ಶಾಕ್ ದೊಡ್ಡ ಹೊರೆಯಾದಂತಾಗಿದೆ.

  • ಹೋಮೋಜಿನೆಸ್ಟ್ ಟೋನ್ಡ್ ಹಾಲು :ರಾಜ್ಯದಲ್ಲಿ ಸದ್ಯ ಹೋಮೋಜಿನೆಸ್ಟ್ ಟೋನ್ಡ್ ಹಾಲು ಅರ್ಧ ಲೀಟರ್ 24 ರೂಪಾಯಿ ಇದ್ರೆ, ಇದೇ ಹಾಲು ಒಂದು ಲೀಟರ್ 45 ರೂಪಾಯಿ ಇದೆ. ಈಗ ಹೊಸ ದರ ಜಾರಿಗೆ ಬಂದ್ರೆ ಅರ್ಧ ಲೀಟರ್ 26 ಮತ್ತು ಒಂದು ಲೀಟರ್ ಹಾಲು 49 ರೂಪಾಯಿ ಆಗಲಿದೆ.
  • ನೀಲಿ‌ ಪ್ಯಾಕೆಟ್ ಹಾಲು – 44 ರೂ.ದಿಂದ 48 ರೂ. ಏರಿಕೆ(ಪ್ರತಿ ಲೀಟರ್​ಗೆ).
  •  ಆರೆಂಜ್ ಪ್ಯಾಕೆಟ್ ಹಾಲು – 54 ರೂ‌. ನಿಂದ 58 ರೂ.
  •  ಸಮೃದ್ಧಿ ಹಾಲಿನ‌ ಪ್ಯಾಕೆಟ್: 56 ರೂ. ನಿಂದ 60 ರೂ.
  •  ಗ್ರೀನ್ ಸ್ಪೇಷಲ್ ಹಾಲು:  54 ರೂ. ನಿಂದ 58 ರೂ.
  •  ನಾರ್ಮಲ್ ಗ್ರೀನ್ ಹಾಲು:  52 ರೂ. ನಿಂದ 56 ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net