ಚಿಕ್ಕನೇರಳೆ ಡೇರಿಗೆ ವೆಂಕಟೇಶ್ ಅಧ್ಯಕ್ಷ

19BTP02 VENKATESHA
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸಿ.ವಿ. ವೆಂಕಟೇಶ್, ಮತ್ತು ಉಪಾಧ್ಯಕ್ಷರಾಗಿ ರಾಜಶೇಖರ್ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಕೇವಲ ಒಂದೊಂದೇ ನಾಮಪತ್ರ ಸಲ್ಲಿಕೆಯಾದ್ದರಿಂದ ಚುನಾವಣಾಧಿಕಾರಿ ಗಿರೀಶ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.ಸಂಘದ ನಿರ್ದೇಶಕರಾದ ಹನುಮೇಗೌಡ, ಹಮೀದ್ ಖಾನ್, ಕಮಲಮ್ಮ, ಮಂಜುನಾಥ, ರೇವಣ್ಣ, ಅನಿತಾ, ಸುಬ್ಬಣ್ಣ, ಸಿದ್ದೇಗೌಡ, ನಾಗನಾಯಕ, ಮಣಿ, ಸಂಘದ ಕಾರ್ಯದರ್ಶಿ ಮಾಧು, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಚಿಕ್ಕನೇರಳೆ ಗ್ರಾಪಂ ಮಾಜಿ ಅಧ್ಯಕ್ಷ ಜ್ಯೋತಿಕುಮಾರ್, ಮುಖಂಡರಾದ ಸಿ.ಜೆ ಪ್ರಕಾಶ, ವಸಂತ್ ಕುಮಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net