ನಾಳೆಯಿಂದ ದುನಿಯಾ ತುಂಬಾ ದುಬಾರಿ: ಜನಸಾಮಾನ್ಯರಿಗೆ ಹೊರೆ| Govt

nandini
Published on

Govt: ಈಗಾಗಲೇ ಆಗಿರುವ ಬೆಲೆ ಏರಿಕೆಯಿಂದ ಜನರು ತಮಗೆ ಅಗತ್ಯವಿರುವ ದಿನನಿತ್ಯದ ವಸ್ತುಗಳನ್ನು ಖರೀದಿಸಿ ಜೀವನ ಮಾಡಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ದೇಶಾದ್ಯಂತ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿರೋದು ಜನರಿಗೆ ಒಂದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಯಾಕಂದ್ರೆ ನಾಳೆಯಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರ, ವಿದ್ಯುತ್ ದರ, ಹೊಸ ಟೋಲ್ ದರಗಳು ಜಾರಿಗೆ ಬರಲಿವೆ.

ಯಾವೆಲ್ಲಾ ದರ ಏರಿಕೆ?

4. ಟೋಲ್ ದರ ಶೇಕಡ 5ರಷ್ಟು ಹೆಚ್ಚಳ

3. ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ, ಅಲ್ಲದೇ ಮಾಸಿಕ ಶುಲ್ಕ 20 ರೂ ಏರಿಕೆ

2. ಮೊಸರು ದರ 4 ರೂಪಾಯಿ ಹೆಚ್ಚಳ

1. ಹಾಲಿನ ದರ 4 ರೂಪಾಯಿ ಹೆಚ್ಚಳ

4. ಕಸ ಸಂಗ್ರಹ ಸೆಸ್ (ತಿಂಗಳಿಗೆ)

ವಸತಿ ಕಟ್ಟಡ:

600 ಚದರಡಿವರೆಗೆ – 10 ರೂ, 601-1000 ಚದರಡಿ – 50 ರೂ, 1001-2000 ಚದರಡಿ – 100 ರೂ,  2001-3000 ಚದರಡಿ – 150 ರೂ, 3001-4000 ಚದರಡಿ – 200 ರೂ, 4000 ಚದರಡಿ ಮೇಲ್ಪಟ್ಟು – 400 ರೂ.

ವಾಣಿಜ್ಯ ಕಟ್ಟಡ:

ನಿತ್ಯ 5ಕೆಜಿವರೆಗೆ – 500 ರೂ. ನಿತ್ಯ 10 ಕೆಜಿವರೆಗೆ – 1400 ರೂ. ನಿತ್ಯ 25 ಕೆಜಿವರೆಗೆ – 3500 ರೂ. ನಿತ್ಯ 50 ಕೆಜಿವರೆಗೆ – 7000 ರೂ., ನಿತ್ಯ 100 ಕೆಜಿವರೆಗೆ – 14000 ರೂ.

5. ಮುದ್ರಾಂಕ ಶುಲ್ಕ: 50ರೂ.ನಿಂದ 500ರೂ.ಗೆ ಹೆಚ್ಚಳ

6. ಅಫಿಡವಿಟ್ ಶುಲ್ಕ: 20 ರೂ.ನಿಂದ 100 ರೂ. ಏರಿಕೆ

ವಾಹನ ಸವಾರರಿಗೂ ಶಾಕ್ :

ಹೊಸ ವಾಹನ ಖರೀದಿಸಬೇಕು ಎಂದು ಕನಸು ಕಾಣುತ್ತಿರುವ ಗ್ರಾಹಕರಿಗೂ ಶಾಕ್ ಎದುರಾಗಿದೆ. ಉಕ್ಕು ಬಿಡಿ ಭಾಗ ದುಬಾರಿಯಾಗಲಿದ್ದು, ಇದರ ಜೊತೆಗೆ ಬಿಡಿ ಭಾಗ ಉಕ್ಕುಗಳ ಆಮದು ದರ ನಾಳೆಯಿಂದಲೇ ಏರಿಕೆಯಾಗುತ್ತದೆ. ಇದರಿಂದಾಗಿ ವಾಹನಗಳ ಬೆಲೆಯೂ ಗಗನಕ್ಕೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net