ನಿಮ್ಮ ಕೈಲಾದಷ್ಟು ಸಹಾಯ ಮಾಡಿ; ಪುಟ್ಟ ಮಗುವಿನ ಉಳಿವಿಗಾಗಿ 'ಕಿಚ್ಚ'ನ ಧ್ವನಿ | sudeep

kicha
Published on

sudeep | ಕನ್ನಡದ ಬಾದ್​ಷಾ ಕಿಚ್ಚ ಸುದೀಪ್​ ಅವರು ತಮ್ಮ ನಟನೆಯ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ನಟರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಕಿಚ್ಚ ಸುದೀಪ್​ ಅವರು ಪುಟ್ಟ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಪರೂಪದ ಕಾಯಿಲೆ ಇರುವ ಬಾಲಕಿಯ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿ ಹಣ ಖರ್ಚಾಗುತ್ತಂತೆ. ಈಗಾಗಲೇ ಇವರು ಆ ಹುಡುಗಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಹಾಗಾಗಿ ಈ ಬಗ್ಗೆ ವಿಡಿಯೋ ಮಾಡಿರುವ ಸುದೀಪ್​, ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ಕಿಚ್ಚ ಹೇಳಿದ್ದೇನು?

ಈ ವಿಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಈ ಕಿಚ್ಚನಿಂದ ನಮಸ್ತೆ. ವಿಡಿಯೋ ಮಾಡೋದಕ್ಕೆ ಒಂದು ಬಹಳ ಮುಖ್ಯವಾಗಿರುವಂತಹ ಕಾರಣ ಇದೆ. ನಮ್ಮ ಫಾರೆಸ್ಟ್​ ಡಿಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡ್ತಿದ್ದ ಒಬ್ಬ ಆಫೀಸರ್​ ಹೆಸರು ಕಿಶೋರ್, ಅವರ ಪತ್ನಿ ಹೆಸರು ನಾಗಶ್ರೀ. ಇವರಿಗೆ 1 ವರ್ಷ 10 ತಿಂಗಳ ಕೀರ್ತನ ಎಂಬ ಪುಟ್ಟ ಮಗು ಇದೆ. ಆ ಮಗು ಬಹಳ ಸುಂದರವಾದ ಒಂದು ಮುಗ್ದ ಮಗು, ಆದರೆ ಈ ಮಗುವಿಗೆ ಬಹಳ ಅಪರೂಪಕ್ಕೆ ಕಾಣಿಸಿಕೊಳ್ಳುವ SMA ಎಂಬ ಕಾಯಿಲೆ ಕಾಣಿಸಿಕೊಂಡಿದೆ. ಈ ಕಾಯಿಲೆಯನ್ನು ಗುಣಪಡಿಸಲು ಔಷಧಿ ಇದೆ. ಆದರೆ ಚಿಕಿತ್ಸೆಗೆ ಸುಮಾರು 16 ಕೋಟಿ ಹಣ ವೆಚ್ಚವಾಗುತ್ತದೆ. ಈಗಾಗಲೇ ಅವರ ತಂದೆ ತಾಯಿ ಎಲ್ಲವನ್ನೂ ಬಿಟ್ಟು, ತಮ್ಮ ಆಸ್ತಿಯನ್ನೆಲ್ಲಾ ಮಾರಿ ಆ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸಾಕಷ್ಟು ಜನ ಇದಕ್ಕೆ ಕೈಜೋಡಿಸಿದ್ದಾರೆ, ನನ್ನ ಕೈಲಾದದ್ದನ್ನು ನಾನು ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಇಲ್ಲಿ ಕ್ಯೂ ಆರ್​ ಕೋಡ್​ ಇದೆ. ಈ ಕ್ಯೂ ಆರ್​ ಕೋಡ್​ಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಕೀರ್ತನ ಎಂಬ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net