

ಪಣಜಿ: ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಆರೋಪದಲ್ಲಿ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಟಿ ಪೂನಂ ಪಾಂಡೆ ಬಂಧನವೇನೋ ಸರಿ. ಹಾಗಾದರೆ, ಗೋವಾ ಬೀಚ್ನಲ್ಲಿ ಬೆತ್ತಲೆಯಾಗಿ ಓಡಾಡಿದ ನಟ ಹಾಗೂ ಮಾಡಲ್ ಮಿಲಿಂದ್ ಸೋಮನ್ರನ್ನೇಕೆ ಬಂಧಿಸಲಿಲ್ಲ. ಇದೆಲ್ಲಾ ಬೂಟಾಟಿಕೆ ಎಂದು ನೆಟ್ಟಿಗರು ಗೋವಾ ಪೊಲೀಸ್ ಮತ್ತು ಸರ್ಕಾರ ಕ್ರಮವನ್ನು ಟೀಕಿಸಿದ್ದಾರೆ.
ಗೋವಾದ ಸಿಕೇರಿಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಪೂನಂ ಪಾಂಡೆ ದಂಪತಿಯನ್ನು ಕಲಂಗೂಟ್ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಪ್ರದೇಶದಲ್ಲಿ ಪೂನಂ ಪಾಂಡೆ ಪೋರ್ನ್ ವಿಡಿಯೋಕ್ಕೆ ರೂಪದರ್ಶಿಯಾಗಿದ್ದು, ಈಕೆಯ ಪತಿ ಸ್ಯಾಮ್ ಬಾಂಬೆ ಚಿತ್ರೀಕರಣ ಮಾಡಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು, ಸಾರ್ವಜನಿಕವಾಗಿ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಕಾಣಕೋಣ ಪೊಲೀಸರಿಗೆ ದೂರನ್ನು ನೀಡಿದ್ದರು. ಈ ದೂರಿನ ಅನ್ವಯ ಇವರ ಚಿತ್ರೀಕರಣಕ್ಕೆ ಭದ್ರತೆ ನೀಡಿದ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪೂನಂ ಪಾಂಡೆ ದಂಪತಿಯನ್ನು ಕಾಣಕೋಣ ಪೊಲೀಸರ ವಶಕ್ಕೆ ನೀಡಲಾಗುವುದು ಎಂದು ಕಲಂಗೂಟ್ ಪೊಲೀಸರು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಾರಣ ಮಿಲಿಂದ್ ಅವರು ತಮ್ಮ 55ನೇ ಹುಟ್ಟುಹಬ್ಬ ಸಂಭ್ರಮದಂದು ಗೋವಾ ಬೀಚ್ನಲ್ಲಿ ಬೆತ್ತಲೆ ಓಡಿದ್ದರು. ಅವರ ಫೋಟೋಕ್ಕೆ ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಅವರ ಫಿಟ್ನೆಸ್ ನೋಡಿ ಪ್ರಶಂಸಿಸಿದ್ದರು. ಆದರೀಗ ಪೂನಂ ಪಾಂಡೆ ವಿಚಾರಕ್ಕೆ ಮಿಲಿಂದ್ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ.
ಪುರುಷನೊಬ್ಬ ಬೆತ್ತಲೆಯಾಗಿ ಓಡಿದರು ಯಾವುದೇ ಕ್ರಮ ತೆಗೆದುಕೊಳ್ಳದೆ, ಮಹಿಳೆಯನ್ನೇ ಗುರಿ ಮಾಡಿದ್ದಾರೆ. ಇದೆಲ್ಲ ಬೂಟಾಟಿಕೆ. ಸಾರ್ವಜನಿಕ ಸ್ಥಳಗಳಲ್ಲಿ ಬೆತ್ತಲೆ ಪ್ರದರ್ಶನ ಕಾನೂನಿನ ಪ್ರಕಾರ ಅಪರಾಧ. ಆದರೆ, ಮಿಲಿಂದ್-ಪೂನಂ ವಿಚಾರದಲ್ಲೇಕೆ ಕ್ರಮ ತೆಗೆದುಕೊಳ್ಳುವಲ್ಲಿ ವ್ಯತ್ಯಾಸ ಏಕೆ? ಇದು ಇಬ್ಬಗೆಯ ನೀತಿ ಎಂದು ನೆಟ್ಟಿಗರು ಜರಿದಿದ್ದಾರೆ. (ಏಜೆನ್ಸೀಸ್)