

| ಗಂಗಾಧರ್ ಬೈರಾಪಟ್ಟಣ
ರಾಮನಗರ: ಲಾಕ್ಡೌನ್ 4ನೇ ಚರಣ ಆರಂಭಗೊಂಡಿದೆ. ಈಗಾಗಲೇ ಜಾರಿಯಲ್ಲಿರುವ ಕಾಮಗಾರಿಗಳಿಗೆ ಕಾರ್ವಿುಕರ ಕೊರತೆ ಎದುರಾಗಲಿದ್ದು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಇದರ ಬಿಸಿ ತಟ್ಟಲಿದೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಿರ್ವಣಗೊಳ್ಳುತ್ತಿರುವ ಅಷ್ಟಪಥ ರಸ್ತೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಉತ್ತರ ಭಾರತದ ನೂರಾರು ಕಾರ್ವಿುಕರು ತಮ್ಮೂರುಗಳಿಗೆ ತೆರಳಲು ತುದಿಗಾಲಲ್ಲಿ ನಿಂತಿದ್ದು, ಅನುಮತಿಗಾಗಿ ಕಾದು ಕುಳಿತಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕಾರ್ವಿುಕರನ್ನು ತವರು ರಾಜ್ಯಗಳಿಗೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕಾಗಿ ಈಗಾಗಲೆ ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ವಿುಕರು ತಹಸೀಲ್ದಾರ್ ಕಚೇರಿ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಅನುಮತಿ ದೊರೆಯುತ್ತಿದ್ದಂತೆ ಮತ್ತು ಅಂತಾರಾಜ್ಯಗಳ ನಡುವೆ ಸಾರಿಗೆ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟರೆ ಇಲ್ಲಿಂದ ಕಾಲ್ಕೀಳುವುದು ನಿಶ್ಚಿತ.
ಸುಮಾರು 36 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎನ್ನುವ ಷರತ್ತಿಗೆ ಒಳಪಟ್ಟು ರಸ್ತೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುವವರಲ್ಲಿ ಬಹುತೇಕ ಮಂದಿ ಉತ್ತರ ಭಾರತೀಯರು. ಬಾರ್ ಬೆಂಡಿಂಗ್, ಸಿಮೆಂಟ್ ಮಿಶ್ರಣ, ಲಾರಿ, ಬೃಹತ್ ಕ್ರೇನ್ಗಳ ಚಾಲನೆ ಸೇರಿ ಎಲ್ಲ ಕೆಲಸವನ್ನು ಇವರೇ ಮಾಡುತ್ತಿದ್ದಾರೆ. ಒಂದು ವೇಳೆ ಇವರೆಲ್ಲರೂ ತೆರಳಿದರೆ ಕಾಮಗಾರಿ ವಿಳಂಬವಾಗಲಿದೆ. ಈಗಾಗಲೆ ಲಾಕ್ಡೌನ್ನಿಂದಾಗಿ ಸುಮಾರು 50 ದಿನಗಳ ಕಾಮಗಾರಿಗೂ ಬ್ರೇಕ್ ಬಿದ್ದಿದೆ.
ಪೊಲೀಸರ ಮೊರೆ: ಕಂಪನಿಯು ಕಾರ್ವಿುಕರು ತೆರಳದಂತೆ ಮನವೊಲಿಸುವ ಕಾರ್ಯ ಮಾಡಿದೆ. ಆದರಿದು ಫಲ ನೀಡದ ಹಿನ್ನೆಲೆಯಲ್ಲಿ ಪಾಸ್ಗಳನ್ನು ನೀಡಬಾರದು ಎಂದು ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅಧಿಕಾರಿಗಳೂ ಗುತ್ತಿಗೆ ಕಂಪನಿ ನೆರವಿಗೆ ಬರುವುದು ಅನುಮಾನ.
ಲಾಕ್ಡೌನ್ನಿಂದ ಸಂಬಳವಿಲ್ಲ: ಕಾರ್ವಿುಕರು ವಾಪಸ್ ತೆರಳಲು ಪ್ರಮುಖ ಕಾರಣ, ಗುತ್ತಿಗೆ ಪಡೆದ ಕಂಪನಿ ಲಾಕ್ಡೌನ್ ಸಂದರ್ಭ ಸಂಬಳ ನೀಡದಿರುವುದು. ಕುಟುಂಬದ ತುತ್ತಿನ ಚೀಲ ತುಂಬಿಸುವ ಸಲುವಾಗಿ ಕೆಲಸಕ್ಕೆ ಬಂದಿದ್ದ ಕಾರ್ವಿುಕರು ತಮ್ಮವರಿಗೆ ಹಣ ಕಳುಹಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ವಿುಕರು ಸಾಕಷ್ಟು ನೊಂದಿದ್ದು, ಬದುಕಿದರೆ ಹೇಗೋ ಜೀವನ ನಡೆಸಿಕೊಳ್ಳಬಹುದು ಎಂದು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಕಷ್ಟು ತೊಂದರೆ ಆಗಲಿದೆ. ಕಾರ್ವಿುಕರನ್ನು ಉಳಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. | ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನನ್ನೂರಿಗೆ ವಾಪಸ್ ಆಗಲು ಅರ್ಜಿ ಹಾಕಿದ್ದೇನೆ. ಅನುಮತಿ ದೊರೆತು, ಸಾರಿಗೆ ವ್ಯವಸ್ಥೆ ಆದರೆ ವಾಪಸ್ ಹೋಗುತ್ತೇನೆ. ಲಾಕ್ಡೌನ್ ಸಂದರ್ಭದಲ್ಲಿ ನಮ್ಮವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. | ರಫೀಕ್ ಕಾರ್ವಿುಕ, ಕೋಲ್ಕತ್ತ