ಸೋನು ಸೂದ್ ಮಾಡಿದ ಒಂದೇ ಸಹಾಯಕ್ಕೆ ಆತನ ಅಭಿಮಾನಿ ಮಾಡಿದ್ದೇನು ನೋಡಿ!

Sonu Sood
Published on

ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಾಲಿವುಡ್​ ನಟ ಸೋನು ಸೂದ್​, ಮಹಾರಾಷ್ಟ್ರದ ಮುಂಬೈನಲ್ಲಿನ ಸಾಕಷ್ಟು ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ನಿತ್ಯ ಹತ್ತಾರು ವಾಹನಗಳ ಮೂಲಕ ಜನರನ್ನು ಕಳುಹಿಸಿ ಅವರ ಪ್ರೀತಿ ಗಿಟ್ಟಿಸಿಕೊಂಡಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಸೋನು ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೋಷಿಯಲ್​ ಮಿಡಿಯಶ ಮೂಲಕವೇ ಸೋನು ಅವರಿಗೆ ಧನ್ಯವಾದವನ್ನೂ ಅರ್ಪಿಸುತ್ತಿದ್ದಾರೆ. ಇದೀಗ ಬಿಹಾರದ ಅಭಿಮಾನಿಯೊಬ್ಬ ವಿಭಿನ್ನ ಶೈಲಿಯಲ್ಲಿ ಕೃತಜ್ಞತೆ ಅರ್ಪಿಸಿದ್ದಾರೆ.

ಬಿಹಾರ ಮೂಲದ ನಿರಾಶ್ರಿತನೊಬ್ಬ ಕೆಲಸಕ್ಕೆಂದು ಮುಂಬೈಗೆ ಬಂದಿದ್ದ. ಕರೊನಾ ಹಿನ್ನೆಲೆಯಲ್ಲಿ ಸೋನು ಸೂದ್ ಸಹಾಯದಿಂದ ಮರಳಿ ಊರು ತಲುಪಿದ್ದ. ನಟನ ಕಾರ್ಯಕ್ಕೆ ಮನಸೋತು, ಊರಲ್ಲೇ ವೆಲ್ಡಿಂಗ್​ ಶಾಪ್​ ಓಪನ್​ ಮಾಡಿದ್ದು, ಅದಕ್ಕೆ ಸೋನು ಸೂದ್​ ವೆಲ್ಡಿಂಗ್​ ಶಾಪ್​ ಎಂದು ಹೆಸರಿಟ್ಟಿದ್ದಾನೆ. ಸದ್ಯ ಆ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದು, ಸೋನು ಸೂದ್​ ಅವರನ್ನೂ ತಲುಪಿದೆ.

ಕೇರಳ, ಕರ್ನಾಟಕ, ಬಿಹಾರ, ಓರಿಸ್ಸಾ ಹೀಗೆ ಸಾಕಷ್ಟು ರಾಜ್ಯಗಳ ಜನರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ನಟ ಸೋನು ಸೂದ್​ ಮಾಡಿದ್ದರು. ಅಷ್ಟೇ ಒಂದಷ್ಟು ಮಂದಿಯನ್ನು ವಿಮಾನದ ಮೂಲಕವೂ ಶಿಫ್ಟ್ ಮಾಡಿಸಿದ್ದರು.

ಸದ್ಯ ಈ ಲಾಕ್​ಡೌನ್​ ಅನುಭವವನ್ನೇ ಪುಸ್ತಕ ರೂಪದಲ್ಲಿ ಹೊರತರುವ ವಿಚಾರ ಸೋನು ಸೂದ್​ ತಲೆಯಲ್ಲಿದ್ದು, ಶೀಘ್ರದಲ್ಲಿಯೇ ಆ ಕೆಲಸಕ್ಕೂ ಅವರು ಮುಂದಡಿ ಇಡಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net