ಆನ್​ಲೈನ್​ನಲ್ಲಿ ಒಂದಾದರು ರಮ್ಯಾ- ರಕ್ಷಿತಾ

Ullasa-2
Published on

ಬೆಂಗಳೂರು: 2000 ಇಸ್ವಿಯಲ್ಲಿ ಸ್ಯಾಂಡಲ್​ವುಡ್​ನ ಬಹುತೇಕ ಸಿನಿಮಾಗಳಲ್ಲಿ ನಾಯಕಿಯರಾಗಿ ಮಿಂಚಿದವರು ನಟಿ ರಮ್ಯಾ ಮತ್ತು ರಕ್ಷಿತಾ. ಈ ಇಬ್ಬರೂ ನಟಿಯರು ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಹವಾ ಸೃಷ್ಟಿಸಿದ್ದರು. ಸಾಲು ಸಾಲು ಹಿಟ್ ಸಿನಿಮಾ ನೀಡುತ್ತ ಅಭಿಮಾನಿ ಬಳಗದಲ್ಲೂ ಇಂದಿಗೂ ಈ ಇಬ್ಬರು ನಟಿಯರು ಕ್ವೀನ್​ಗಳಾಗಿಯೇ ಉಳಿದಿದ್ದಾರೆ.

ಜತೆಯಲ್ಲಿ ಈ ಇಬ್ಬರ ನಡುವೆ ಸ್ಟಾರ್ ವಾರ್ ನಡೆಯುತ್ತಿದೆ ಎಂಬ ಸುದ್ದಿ ಆ ದಿನಗಳಲ್ಲಿಯೇ ಹರಿದಾಡಿತ್ತು. ಅಷ್ಟೇ ಅಲ್ಲ ಸಿನಿಮಾ ವಿಚಾರದಲ್ಲಿ ದೊಡ್ಡ ಪೈಪೋಟಿಯೂ ಇತ್ತು ಎಂಬುದು ಗೊತ್ತಿರುವ ವಿಚಾರ. ಇದೀಗ ಇವರಿಬ್ಬರು ಮತ್ತೆ ಒಂದಾಗಿದ್ದಾರೆ. ಅದೂ ಇನ್​ಸ್ಟಾಗ್ರಾಂನಲ್ಲಿ!

ಸಿನಿಮಾ ಕ್ಷೇತ್ರದ ಜತೆಗೆ ರಾಜಕೀಯವಾಗಿಯೂ ರಮ್ಯಾ ಬಿಜಿಯಾದರು. ರಕ್ಷಿತಾ ಸಹ ಅವರ ವಿರುದ್ಧವೇ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಹೀಗೆ ದಿನಗಳೆದಂತೆ ರಕ್ಷಿತಾ ರಿಯಾಲಿಟಿ ಶೋಗಳತ್ತ ಗಮನ ಹರಿಸಿದರೆ, ರಮ್ಯಾ ರಾಜಕೀಯದ ಜತೆಗೆ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡರು.

ಇದೀಗ ಈ ನಟಿಯರು ತೆಗೆದುಕೊಂಡ ನಿರ್ಧಾರದಿಂದ ಅಭಿಮಾನಿ ಬಳಗ ಸಂಭ್ರಮ ಪಡುವಂತಾಗಿದೆ. ಅಂದರೆ ವೈರತ್ವ ಮರೆತು ಇನ್​ಸ್ಟಾಗ್ರಾಂನಲ್ಲಿ ಪರಸ್ಪರರು ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಈ ಮೊದಲು ಈ ನಟಿಯರು ಸಿನಿಮಾದಲ್ಲಿ ಸಕ್ರಿಯರಿದ್ದಾಗ ಸೋಷಿಯಲ್ ಮೀಡಿಯಾ ಇಷ್ಟೊಂದು ವೇಗ ಪಡೆದುಕೊಂಡಿರಲಿಲ್ಲ. ಸಿನಿಮಾದಿಂದ ದೂರವಾದ ಮೇಲೆ ಪರಸ್ಪರರು ಜಾಲತಾಣ ಖಾತೆಗಳನ್ನು ಹೊಂದಿದ್ದರೂ, ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿರಲಿಲ್ಲ. ಇದೀಗ ಒಂದಾಗಿರುವುದು ಖುಷಿಯ ವಿಚಾರವೇ ಸರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net