2900 ಕಿ.ಮೀ ನಡೆದು ಮನೆ ಸೇರಿದ ವಲಸಿಗ; ಈಗ ಆತನಿಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್​​

Jadav 22 april 20
Published on

ನಾಗಾನ್: ಲಾಕ್​ಡೌನ್ ಹಿನ್ನೆಲೆ ವಲಸೆ ಕಾರ್ವಿುಕನೊಬ್ಬ 2,900 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ತನ್ನ ಮನೆ ತಲುಪಿರುವ ಘಟನೆ ಅಸ್ಸಾಂನ ನಾಗಾನ್​ನಲ್ಲಿ ನಡೆದಿದೆ.

ಜಾಧವ್ ಗೊಗಯ್ ಗುಜರಾತ್​ನ ಕಾರ್ಖಾನೆಯೊಂದರಲ್ಲಿ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ. ಮಾರ್ಚ್ 24ಕ್ಕೆ ಲಾಕ್​ಡೌನ್ ಘೊಷಣೆಯಾದ ನಂತರ ಕಾರ್ಖಾನೆ ತಾತ್ಕಾಲಿಕವಾಗಿ ಬಾಗಿಲು ಮುಚ್ಚಿತು. ಜಾಧವ್ ಮಾರ್ಚ್ 25ರಂದು ಗುಜರಾತ್​ನಿಂದ ಕಾಲ್ನಡಿಗೆಯಲ್ಲಿ ಹೊರಟರು. ಜಾಧವ್ ಇದೀಗ ನಾಗಾನ್ ತಲುಪಿದ್ದು ಆತನನ್ನು ಅಲ್ಲಿನ ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಮಾರ್ಗ ಮಧ್ಯೆಯಲ್ಲಿ ಸಂಚರಿಸುತ್ತಿದ್ದ ಲಾರಿಗಳ ಸಹಾಯದಿಂದಾಗಿ ತಾನು ಊರಿಗೆ ತಲುಪಿರುವುದಾಗಿ ಜಾಧವ್ ಹೇಳಿದ್ದಾನೆ. ಊರಿಗೆ ಬಾರದೆ ಗುಜರಾತ್​ನಲ್ಲೇ ಉಳಿದುಬಿಟ್ಟಿದ್ದರೆ ಊಟವಿಲ್ಲದೆ ಸಾಯಬೇಕಿತ್ತು ಎಂದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net