More

    ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೊಂದು ಎಚ್ಚರಿಕೆ…! ‘ಯಾವ ಕಾರಣಕ್ಕೂ ರಾಜಿ ಇಲ್ಲ’ ಎಂದು ಅವರು ಹೇಳಿದ್ದೇಕೆ…?

    ನವದೆಹಲಿ: ಕರೊನಾ ವೈರಸ್​ ವಿರುದ್ಧ ಹೋರಾಡಲು ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿಕೊಂಡಿರುವ ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತೆಯರ ಮೇಲೆ ದೇಶದ ಹಲವು ಕಡೆಗಳಲ್ಲಿ ಹಲ್ಲೆಯಾಗುತ್ತಿದೆ.

    ಕರೊನಾ ಸೋಂಕಿತರು, ಶಂಕಿತರು ಅವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಆರೋಗ್ಯ ಸಿಬ್ಬಂದಿ ಕಾಣಿಸಿಕೊಂಡರೆ, ಅವರಿಂದಾಗಿ ಕರೊನಾ ಹರಡಬಹುದು ಎಂಬ ಕಾರಣಕ್ಕೂ ದಾಳಿ ಮಾಡಲಾಗುತ್ತಿದೆ.

    ಈ ಹಲ್ಲೆ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಇಂದು ಸುಗ್ರೀವಾಜ್ಞೆ ಮೂಲಕ ಹೊಸ ಕಾಯ್ದೆಯನ್ನು ಜಾರಿ ಮಾಡಿದೆ. ಅದರ ಅನ್ವಯ ಆರೋಗ್ಯ ಕಾರ್ಯಕರ್ತರು, ವೈದ್ಯರು, ನರ್ಸ್​ಗಳು, ಆಶಾಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುವವರಿಗೆ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವವರಿಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು ಐದು ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ.

    ಅದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಖಡಕ್​ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ.

    ನಮ್ಮ ವೈದ್ಯಕೀಯ, ಆರೋಗ್ಯ ಸಿಬ್ಬಂದಿಯ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸೂಕ್ಷ್ಮವಾಗಿ ವಾರ್ನ್ ಮಾಡಿದ್ದಾರೆ.

    ಕೊವಿಡ್​-19ರ ವಿರುದ್ಧ ಧೈರ್ಯದಿಂದ ಹೋರಾಡುತ್ತಿರುವ ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತನ ಸುರಕ್ಷತೆ ನಮ್ಮ ಬದ್ಧತೆಯಾಗಿದೆ. ಅದನ್ನು ಸಾಂಕ್ರಾಮಿಕ ಕಾಯಿಲೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ 2020ರಲ್ಲಿ ಸ್ಪಷ್ಟವಾಗಿ ಪ್ರಕಟಿಸಲಾಗಿದೆ ಎಂದು ನರೇಂದ್ರ ಮೋದಿಯವರು ಫೇಸ್​ಬುಕ್​, ಟ್ವಿಟರ್​ಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​​)

    ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೊಂದು ಎಚ್ಚರಿಕೆ...! 'ಯಾವ ಕಾರಣಕ್ಕೂ ರಾಜಿ ಇಲ್ಲ' ಎಂದು ಅವರು ಹೇಳಿದ್ದೇಕೆ...?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts