

ಕಟಕ್: ಲಾಕ್ಡೌನ್ ವಲಸೆ ಕಾರ್ಮಿಕರನ್ನು ಕಾಡಿದಷ್ಟು ಬಹುಶಃ ಬೇರೆಯವನ್ನು ಕಾಡಲಿಲ್ಲ. ಅವರು ತಮ್ಮ ಸ್ವಂತ ಊರಿಗೆ ತೆರಳಲು ಪಟ್ಟ ಕಷ್ಟ ಮಾತ್ರ ಹೇಳತೀರದು.
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದೂರದ ಒಡಿಶಾ ಮೂಲದ ಮೂವರು ಬೈಸಿಕಲ್ ಮೂಲಕ ತಮ್ಮ ಸ್ವಗ್ರಾಮ ತಲುಪಿದ್ದಾರೆ.
ಚಂದನ್ ಹಾಗೂ ಅವರ ಪತ್ನಿ ಮತ್ತೊಂದು ಬೈಸಿಕಲ್ನಲ್ಲಿ ಚಂದನ್ ಸ್ನೇಹಿತ ಜಿನಾ ಕಟಕ್ ತಲುಪಿದರು. ಕಟಕ್ನಲ್ಲಿ ಬೈಸಿಕಲ್ ತುಳಿಯುತ್ತಿರುವುದನ್ನು ನೋಡಿದ ಸ್ಥಳೀಯರು ಸುರಕ್ಷಿತವಾಗಿ ಟ್ರಕ್ ಮೂಲಕ ಸ್ವಗ್ರಾಮ ತಲುಪುವಂತೆ ಮಾಡಿದ್ದಾರೆ.
ಇದನ್ನೂ ಓದಿ ಬುದ್ಧಿವಾದ ಹೇಳಿದ್ದಕ್ಕೆ ಹೆತ್ತವರನ್ನೇ ಕೊಂದ ಮಗ
ಚಂದನ್ ಮತ್ತು ಟಪಾನ್ ಜಿನಾ ಒಡಿಶಾದ ಭದ್ರಾಕ್ ಜಿಲ್ಲೆಯರು . ಚಂದನ್ ವಿವಾಹವಾಗಿದ್ದರು. ಮೂವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕರೊನಾ ವೈರಸ್ ಹರಡುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿತು. ಕೆಲಸ ಇಲ್ಲದ ಪರಿಣಾಮ ತಮ್ಮ ಸ್ವಗ್ರಾಮಕ್ಕೆ ತೆರಳಲು ನಿರ್ಧರಿಸಿದರು. ಆದರೆ ಇವರ ಬಳಿ ಹಣ ಇರಲಿಲ್ಲ. ಕೊನೆಗೆ ಬೈಸಿಕಲ್ ಖರೀದಿಸಿ ಅದರಲ್ಲಿ ಸ್ವಗ್ರಾಮ ತಲುಪಲು ನಿರ್ಧರಿಸಿದರು.
ಚಂದನ್ ಬೈಸಿಕಲ್ನಲ್ಲಿ ಪತ್ನಿಯನ್ನು ಕರೆದುಕೊಂಡು ತೆರಳಲು ಮುಂದಾದರು. ಎರಡು ಬೈಸಿಕಲ್ನಲ್ಲಿ ಮೂವರು ಬೆಂಗಳೂರು ಬಿಟ್ಟು ತೆರಳಿದರು. ಕಟಕ್ನಲ್ಲಿ ಬೈಸಿಕಲ್ ತುಳಿಯುತ್ತಿದ್ದ ಚಂದನ್ ಹಾಗೂ ಜಿನಾ ಅವರನ್ನು ನೋಡಿದ ಸ್ಥಳೀಯರು ಅವರಿಗೆ ಆಹಾರ ನೀಡಿ ನಂತರ ಟ್ರಕ್ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟರು. (ಏಜೆನ್ಸೀಸ್)