BiggBoss ಶೋನಲ್ಲಿ ಮೇಜರ್​ ಟ್ವಿಸ್ಟ್​; ಮಿಡ್​ವೀಕ್​ ಎಲಿಮಿನೇಷನ್​ನಲ್ಲಿ ಮನೆಯಿಂದ ಆಚೆ ಹೋಗಿದ್ದು ಇವರೇ ನೋಡಿ

Bigg Boss
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (BiggBoss) ಶುರುವಾಗಿ 90ಕ್ಕೂ ಅಧಿಕ ದಿನಗಳಾಗಿದ್ದು, ದಿನ ಕಳೆದಂತೆ ಶೋ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಬಿಗ್​ಬಾಸ್ ಶೋನಲ್ಲಿ ಮೇಜರ್​ ಟ್ವಿಸ್ಟ್​ ಒಂದು ನಡೆದಿದ್ದು, ಮಿಡ್​ವೀಕ್​ ಎಲಿಮಿನೇಷನ್​ ಮಾಡಲಾಗಿದೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದ್ದು, ಸ್ಟಾಂಗ್​ ಸ್ಫರ್ಧಿಯೊಬ್ಬರು ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

ಸದ್ಯ ಬಿಗ್​ಬಾಸ್​ (BiggBoss) ಮನೆಯಲ್ಲಿ ಉಗ್ರಂ ಮಂಜು, ರಜತ್​, ತ್ರಿವಿಕ್ರಮ್​, ಧನರಾಜ್​, ಹನುಮಂತ, ಚೈತ್ರಾ ಕುಂದಾಪುರ, ಐಶ್ವರ್ಯಾ ಶಿಂಧೋಗಿ, ಮೋಕ್ಷಿತಾ ಪೈ, ಗೌತಮಿ ಹಾಗೂ ಭವ್ಯ ಉಳಿದುಕೊಂಡಿದ್ದು, ಈ 10 ಜನರ ಪೈಕಿ ಒಬ್ಬರು ಕಾಣೆಯಾಗಿದ್ಧಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಮಿಡ್​ವೀಕ್​ ಎಲಿಮಿನೇಷನ್​ ನಡೆದಿದೆ ಎಂದು ಬಹುತೇಕರು ಹೇಳುತ್ತಿದ್ದಾರೆ.

BBKS 11

ಕಳೆದ ವಾರ ಬಿಗ್​ಬಾಸ್​ (BiggBoss) ಮನೆಯಲ್ಲಿ ಯಾವುದೇ ಎಲಿಮಿನೇಷನ್​ ನಡೆದಿರಲಿಲ್ಲ. ಅದಕ್ಕೂ ಮುಂಚಿತವಾಗಿ ಶಿಶಿರ್​ ಎಲಿಮಿನೇಟ್​ ಆಗಿದ್ದರು. ಇದೇ ಸಂಚಿಕೆಯಲ್ಲಿ ಗೋಲ್ಡ್​ ಸುರೇಶ್​ ಕೂಡ ವೈಯಕ್ತಿಕ ಕಾರಣಗಳನ್ನು ನೀಡಿ ಶೋನಿಂದ ನಿರ್ಗಮಿಸಿದ್ದರು. ಹೀಗಾಗಿ ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಹೀಗಾಗಿ ಸಂಚಿಕೆಯ ಕೊನೆಯಲ್ಲಿ ತ್ರಿವಿಕ್ರಮ್​ ಅವರ ಫೇಕ್​ ಎಲಿಮಿನೇಷನ್​ ಮಾಡಲಾಗಿತ್ತು. ಇದೀಗ ಫಿನಾಲೆಗೆ ಕೆಲವೇ ವಾರಗಳು ಬಾಕಿ ಉಳಿದಿರುವ ನಡುವೆಯೇ ಮಿಡ್​ವೀಕ್​ ಎಲಿಮಿನೇಷನ್​ ನಡೆದಿರುವುದು ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಸ್ಟಾಂಗ್​ ಸ್ಫರ್ಧಿಯೊಬ್ಬರು ಮಿಡ್​ವೀಕ್​ನಲ್ಲಿ ಎಲಿಮಿನೇಟ್​ ಆಗಿದ್ದು, ಈ ಕುರಿತು ಬಿಗ್ ಬಾಸ್ ಸಂಚಿಕೆಯ ಮೂಲಕವೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಅಂತಿಮವಾಗಿ ಯಾರು ಎಲಿಮಿನೇಟ್​ ಆಗಿದ್ದಾರೆ ಎಂಬುದರ ಕುರಿತು ಪ್ರೇಕ್ಷಕರಿಗೆ ಸ್ಪಷ್ಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net