

ನವದೆಹಲಿ: ಮೈಕ್ರೋಸಾಫ್ಟ್ ಕ್ಲೌಡ್ ಸರ್ವೀಸ್ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ವಿಮಾನ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಅಮೆರಿಕ, ಫ್ರಾನ್ಸ್, ಹಾಂಗ್ಕಾಂಗ್, ಆಸ್ಟ್ರೇಲಿಯಾ ಮತ್ತು ಭಾರತ ಸೇರಿ ಅನೇಕ ರಾಷ್ಟ್ರಗಳಲ್ಲಿ ವಿಮಾನ ಸೇವೆಗೆ ಅಡ್ಡಿ ಉಂಟಾಗಿದ್ದು, ಹಲವು ಏರ್ಪೋರ್ಟ್ನಲ್ಲಿ ಪ್ರಯಾಣಿಕರು ಪರದಾಟ ಅನುಭವಿಸಿದ್ದಾರೆ. ಏರ್ಪೋರ್ಟ್ಗಳಲ್ಲಿ ವಿಮಾನಗಳು ಟೇಕಾಫ್ ಸಹ ಆಗಿಲ್ಲ. ಅಲ್ಲದೆ, ಟಿಕೆಟ್ ಬುಕ್ಕಿಂಗ್ ಆಗದೇ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
ವಿಮಾನ ಸೇವೆ ಮಾತ್ರವಲ್ಲದೆ, ಷೇರು ಮಾರುಕಟ್ಟೆ, ಜಿಮೇಲ್, ಅಮೇಜಾನ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಮೇಲೂ ಮೈಕ್ರೋಸಾಫ್ಟ್ ಕ್ಲೌಡ್ ಸವೀಸ್ ಸಮಸ್ಯೆ ಪರಿಣಾಮ ಬೀರಿದೆ. ಅಮೆರಿಕಾದ್ಯಂತ 911 ವಿಮಾನ ಸೇವೆಗಳು ಸ್ಥಗಿತಗೊಂಡಿವೆ. ಲಂಡನ್ನ ಷೇರು ಮಾರುಕಟ್ಟೆಯಲ್ಲೂ ವ್ಯತ್ಯಯವಾಗಿದೆ. ಆಸ್ಟ್ರೇಲಿಯಾದ ಐಟಿ ಕಂಪನಿಗಳಲ್ಲಿ ತಲ್ಲಣ ಉಂಟಾಗಿದೆ. ಮೈಕ್ರೋಸಾಫ್ಟ್ ಆ್ಯಪ್ಗಳ ಕಾರ್ಯ ಸ್ಥಗಿತಗೊಂಡಿದೆ.
ಸೇವೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ತಕ್ಷಣ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ಶೀಘ್ರದಲ್ಲೇ ಸಮಸ್ಯೆ ಸರಿಪಡಿಸಲಾಗುವುದು ಎಂದು ಹೇಳಿದೆ. ಅಲ್ಲದೆ, ಸಾಫ್ಟ್ವೇರ್ ಬಳಕೆದಾರರು ಸಹಕರಿಸಲು ವಿನಂತಿಸಿದೆ.