ಮದ್ವೆ ಆಮಂತ್ರಣ ಪತ್ರ ಹಿಡಿದು ಜೈಲಿನಲ್ಲಿರುವ ದರ್ಶನ್​ ಭೇಟಿಯಾದ ತರುಣ್! ಸೋನಾಲ್​ ಜತೆ ಯಾವಾಗ ಮದ್ವೆ?

Darshan Tharun Sudhir,

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಿನ್ನೆಯಷ್ಟೇ (ಜುಲೈ 18) ಆಗಸ್ಟ್​ 1ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ನೆಚ್ಚಿನ ನಟ ಜೈಲು ಪಾಲಾಗಿದ್ದು, ಸಾಕಷ್ಟು ಅಭಿಮಾನಿಗಳು, ಆಪ್ತರು, ಕಲಾವಿದರು ದರ್ಶನ್​ರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ನಿರ್ದೇಶಕ ತರುಣ್​ ಸುಧೀರ್​ ಭೇಟಿಯಾಗಿದ್ದಾರೆ.

ಕಾಟೇರ ಚಿತ್ರದ ಯಶಸ್ವಿ ನಿರ್ದೇಶಕ ತರುಣ್​ ಸುಧೀರ್​ ಅವರು ದರ್ಶನ್​ರನ್ನು​ ಭೇಟಿ ಮಾಡಲು ಒಂದು ವಿಶೇಷ ಕಾರಣವಿದೆ. ಕೆಲ ದಿನಗಳಿಂದ ತರುಣ್​ ಅವರ ಮದುವೆ ಸುದ್ದಿ ಹರಿದಾಡುತ್ತಿದೆ. ನಟಿ ಸೋನಲ್ ಮೊಂಥೆರೋ ಜತೆ ತರುಣ್​ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತರುಣ್​ ಆಗಲಿ ಸೋನಲ್​ ಆಗಲಿ ಎಲ್ಲಿಯೂ ಮಾತನಾಡಿಲ್ಲ. ಆದರೂ ತೆರೆಮರೆಯಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತಿವೆ ಎಂದು ಸ್ಯಾಂಡಲ್​ವುಡ್​ನಲ್ಲಿ ಚರ್ಚೆಯಾಗುತ್ತಿದೆ.

ತಾಜಾ ಸಂಗತಿ ಏನೆಂದರೆ, ತನ್ನ ಮದುವೆ ಕಾರಣಕ್ಕೆ ತರುಣ್​ ಸುಧೀರ್​, ನಟ ದರ್ಶನ್​ರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ದರ್ಶನ್​ ಜೈಲು ಪಾಲಾದ ನಂತರ ಮೊದಲ ಬಾರಿಗೆ ದರ್ಶನ್​ರನ್ನು ತರುಣ್​ ಸುಧೀರ್​ ಭೇಟಿ ಮಾಡಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆ ಕೊಡುವ ನಿಟ್ಟಿನಲ್ಲಿ ಜೈಲಿಗೆ ಹೋಗಿದ್ದಾರೆ ಎನ್ನಲಾಗಿದೆ. ತರುಣ್- ಸೋನಲ್ ಮದುವೆಗೆ ದರ್ಶನ್ ಸಮ್ಮತ್ತಿಸಿದ್ದರು ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ದರ್ಶನ್ ಇಲ್ಲದೆ ಮದುವೆಯನ್ನು ಮುಂದೂಡುವುದಕ್ಕೆ ತರುಣ್ ಸಜ್ಜಾಗಿದ್ದಾರಂತೆ. ಆದರೆ, ಹಿರಿಯರ ಸಲಹೆ ಮೇರೆಗೆ ಮದುವೆ ರೆಡಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಅಂದಹಾಗೆ ಆಗಸ್ಟ್ 10 ಮತ್ತು 11ಕ್ಕೆ ತರುಣ್-ಸೋನಾಲ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಹಿರಿಯರು ಹಾಗೂ ದರ್ಶನ್ ಸಲಹೆ ಸಿಕ್ಕ ನಂತರ ಮದ್ವೆಗೆ ಮುಂದಾಗಿದ್ದರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದರ್ಶನ್​ ಜೈಲಿನಲ್ಲಿರುವ ಕಾರಣ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ದರ್ಶನ್​ಗೆ ಕೊಡಲು ತರುಣ್​ ಜೈಲಿಗೆ ಭೇಟಿ ನೀಡಿದ್ದಾರೆ. ಎರಡು ಕಾರುಗಳಲ್ಲಿ ತಮ್ಮ ಸ್ನೇಹಿತರ ಜತೆ ಜೈಲಿಗೆ ಆಗಮಿಸಿರುವ ತರುಣ್, ಮದುವೆ ಆಮಂತ್ರಣ ನೀಡಿ ಆಶಿರ್ವಾದ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗೌತಿ ಬತ್ತಳಿಕೆಯಿಂದ ಹೊಸ ಬೌಲಿಂಗ್​ ಅಸ್ತ್ರ! ಡೇಲ್ ಸ್ಟೇನ್ ರೀತಿ ತಯಾರಿ, ಯಾರು ಗೊತ್ತಾ ಆ ಬೌಲರ್​?

ಈ ಒಂದು ಕಾರಣಕ್ಕೆ ನತಾಶಾಗೆ ಸಿಗಲ್ವಂತೆ ಜೀವನಾಂಶ! ಹಾರ್ದಿಕ್​ ಡಿವೋರ್ಸ್​ ಬೆನ್ನಲ್ಲೇ ಹೀಗೊಂದು ಚರ್ಚೆ

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…