

ನಮಗೆ ಗೊತ್ತಿಲ್ಲದೆಯೇ, ಕೆಲವೊಮ್ಮೆ ಗೊತ್ತಿದ್ದೂ ಮೈಕ್ರೋ ಪ್ಲಾಸ್ಟಿಕ್ನ್ನು ನಾವು ನಿತ್ಯ ಸೇವಿಸುವಂತಾಗಿದೆ! ಹೌದು, ಮನುಷ್ಯನ ದೇಹದಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದರಿಂದ ಹೃದಯ ಮತ್ತು ಮೂತ್ರಕೋಶ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದರ ಬಗ್ಗೆ ತಜ್ಞವೈದ್ಯರು ಎಚ್ಚರಿಸಿದ್ದಾರೆ. ನೆದರಲ್ಯಾಂಡ್ನ University of Amsterdamನ ವೈದ್ಯಕೀಯ ಅಧ್ಯಯನ ವಿಭಾಗವು ಇತ್ತೀಚೆಗೆ ಸಂಶೋಧನಾ ವರದಿಯೊಂದು ಬಿಡುಗಡೆ ಮಾಡಿದ್ದು, ಈ ಕುರಿತಂತೆ ಮಹತ್ವದ ಮಾಹಿತಿಗಳನ್ನು ಹೊರಗೆಡವಿದೆ. ಈ ವಿಶ್ವವಿದ್ಯಾಲಯ ಹೇಳುವಂತೆ ನೆದರಲ್ಯಾಂಡ್ನ ಸರಾಸರಿ ಶೇಕಡ 80 ಜನರ ದೇಹದಲ್ಲಿ ಪ್ಲಾಸ್ಟಿಕ್ ಕಣಗಳು ಸೇರಿಕೊಂಡಿವೆ. 22 ಜನರ ರಕ್ತದ ಮಾದರಿಯನ್ನು ತೆಗೆದುಕೊಂಡು ಪರಿಶೀಲಿಸಿದಾಗ, ಅದರಲ್ಲಿ 17 ಜನರ ರಕ್ತದಲ್ಲಿ ಟಟ್ಝಢಛಿಠಿಜಢ್ಝಛ್ಞಿಛಿ ಠಿಛ್ಟಿಛಿಟಜಠಿಜಚ್ಝಚಠಿಛಿ, ಸ್ಟೈರಿನ್ ಪಾಲಿಮಾರ್ನಿಂದ ಮಾಡಲ್ಪಟ್ಟ ಮೈಕ್ರೋ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ.
ಯಾವುದರಿಂದ ದೇಹ ಸೇರುತ್ತದೆ?: ಸಕ್ಕರೆ, ಉಪ್ಪು, ನಲ್ಲಿ ನೀರು, ಗಾಳಿ, ಪ್ಲಾಸ್ಟಿಕ್ ಬಾಟಲ್, ಕೆಲ ತರಕಾರಿಗಳು.
ಏನಿದು?: 5 ಮಿಲಿಮೀಟರ್ಗಿಂತ ಚಿಕ್ಕದಾದ ಅಂದರೆ ಗಾತ್ರದಲ್ಲಿ 0.2 ಇಂಚಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕಣವನ್ನು ಮೈಕ್ರೋ ಪ್ಲಾಸ್ಟಿಕ್ ಎಂದು ಕರೆಯಲಾಗುತ್ತದೆ. (ಮೈಕ್ರೋ- ಸೂಕ್ಷ್ಮ, ಸಣ್ಣ)