ವಿನಯ್, ಮೈಕಲ್ ತಪ್ಪಿನ ಭಾರ ಬಿಗ್​ಬಾಸ್​​ ಮನೆಯವರ ಮೇಲೆ; ಇವರು ಮಾಡಿದ ತಪ್ಪೇನು?

bigg boss
Published on

ಬೆಂಗಳೂರು: ಬಿಗ್​ಬಾಸ್​​​ ಸ್ಪರ್ಧಿಗಳಲ್ಲಿ ವಿನಯ್​​ ಮತ್ತು ಮೈಕಲ್​​​ ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಈ ಕುರಿತಾಗಿ ಮನೆಯಲ್ಲಿ ಅಸಮಧಾನ ವ್ಯಕ್ತವಾಗಿದೆ.

ದೊಡ್ಮನೆಯೊಳಗೆ ಸ್ಮೋಕಿಂಗ್​ ರೂಮ್​ ಅನ್ನು ಒಬ್ಬರಿಗಿಂತ ಹೆಚ್ಚು ಜನರು ಬಳಸಬಾರದು ಎಂಬ ನಿಯಮ ಇದೆ. ಮೈಕೆಲ್​ ಮತ್ತು ವಿನಯ್​ ಗೌಡ ಏಕಕಾಲಕ್ಕೆ  ಬಳಕೆ ಮಾಡಿ ಒಂಟಿ ಮನೆಯ ನಿಯಮ​ ಉಲ್ಲಂಘಿಸಿದ್ದಾರೆ. ಮಾಡಿದ ತಪ್ಪಿಗೆ ಅವರು ಕ್ಷಮೆ ಕೂಡ ಕೇಳಿದ್ದಾರೆ. ಅದರೂ ಬಿಗ್​ ಬಾಸ್​ ಕರುಣೆ ತೋರಿಸಿಲ್ಲ. ಇವರಿಬ್ಬರು ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಶಿಕ್ಷೆ ನೀಡಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಮಾಡಿದ ತಪ್ಪಿನಿಂದ ಎಲ್ಲರೂ 50ಕೆಜಿ ಭಾರ ಹೊರಬೇಕಾಗಿದ್ದು, ಈ ಬಗ್ಗೆ ಮನೆಯ ಹೆಚ್ಚಿನ ಸದಸ್ಯರು ವಿನಯ್ ಮೇಲೆ ಸಿಟ್ಟಾಗಿದ್ದಾರೆ.

ರೂಲ್ಸ್ ಬಗ್ಗೆ ಮಾತನಾಡುತ್ತಿದ್ದ ವಿನಯ್ ಅವರೇ ಸ್ವತಃ ರೂಲ್ಸ್ ಬ್ರೇಕ್ ಮಾಡಿ ಮನೆಯ ಎಲ್ಲರೂ ಶಿಕ್ಷೆ ಅನುಭವಿಸುವಂತೆ ಮಾಡಿದ್ದಾರೆ. ಈ ಕುರಿತಾಗಿ ಮನೆಯಲ್ಲಿ ಅಸಮಧಾನ ವ್ಯಕ್ತವಾಗಿದೆ. ಈ ಬಗ್ಗೆ ಮನೆಯ ಸದಸ್ಯರು ಬಹಿರಂಗವಾಗಿಯೇ ವಿನಯ್ ಮತ್ತು ಮೈಕೇಲ್ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಎಪಿಸೋಡ್​ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. 

ಡ್ರೋನ್ ಪ್ರತಾಪ್ "ಬೇರೆ ಯಾರಾದ್ರೂ ಈ ತಪ್ಪು ಮಾಡಿದ್ರೆ ಅವ್ರು ಬದುಕೋಕೆ ಬಿಡ್ತಾ ಇದ್ರಾ?" ಎಂದು ಹೇಳಿದ್ದರೆ ಇನ್ನೊಬ್ಬರು ಬಿಗ್ ಬಾಸ್ ಮನೆಯಲ್ಲಿ ಬೇರೆಯವರು ತಪ್ಪು ಮಾಡಿದರೂ ನಾವು ಶಿಕ್ಷೆ ಅನುಭವಿಸಬೇಕಾಗುತ್ತದೆ" ಎಂದು ಹೇಳುವ ಪ್ರೋಮೊ ಬಿಗ್​ಬಾಸ್​​ ಇಂದಿನ ಎಪಿಸೋಡ್​ ಬಗ್ಗೆ ಇರುವ ಕೂತುಹಲ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net