

ವಾಷಿಂಗ್ಟನ್: ಭಾರತದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ರೋಲಿಗರ ಬಾಯಿಗೆ ಸಿಕ್ಕಿದ್ದ ನೀಲಿ ತಾರೆ ಮಿಯಾ ಖಲೀಫಾ ಇದೀಗ ಮತ್ತೊಮ್ಮೆ ರೈತರ ಪರ ದನಿ ಎತ್ತಿದ್ದಾರೆ. ಅಷ್ಟಕ್ಕೂ ಈ ಬಾರಿ ಏನಿದೆ ಅವರ ಮಾತು ಎಂದು ತಿಳಿಯಲು ಮುಂದೆ ಓದಿ.
ಅಂದ ಹಾಗೆ ಭಾನುವಾರದಂದು ಮಿಯಾ ಖಾನ್ಗೆ ಮಧ್ಯಾಹ್ನದ ವಿಶೇಷ ಊಟವನ್ನು ಭಾರತೀಯ ಮೂಲದ ಕೆನಡಿಯನ್ ಕವಯಿತ್ರಿ ರೂಪಿ ಕೌರ್ ಮಾಡಿದ್ದರಂತೆ. ಅದರ ವಿಡಿಯೋವನ್ನು ಮೊದಲು ಹಂಚಿಕೊಂಡಿದ್ದ ಮಿಯಾ ರೂಪಿಗೆ ಧನ್ಯವಾದ ತಿಳಿಸಿದ್ದರು. ಗುಲಾಬ್ ಜಾಮೂನು, ಸಮೋಸ, ಆಲೂ ಕರಿ ಒಳಗೊಂಡಿದ್ದ ಭಾರತೀಯ ಊಟ ಅದಾಗಿತ್ತು. ಈ ವಿಡಿಯೋ ಹಂಚಿಕೊಂಡ ಸ್ವಲ್ಪ ಸಮಯದಲ್ಲೇ ಊಟದ ತಟ್ಟೆಯ ಮತ್ತೊಂದು ಫೋಟೋ ಹಂಚಿಕೊಂಡ ಮಿಯಾ "ರೈತರಿಗಾಗಿ ಕೂಗು" ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ರೈತರ ಪರ ಧ್ವನಿ ಎತ್ತಿ, ಟ್ರೋಲ್ಗೆ ಒಳಗಾಗಿದ್ದರೂ ನಾನು ನನ್ನ ಮಾತನ್ನು ಹಿಂಪಡೆಯುವುದಿಲ್ಲ ಎಂದು ಈ ಮೂಲಕ ಆಕೆ ಹೇಳಿಕೊಂಡಿದ್ದಾರೆ. ಮಿಯಾ ಅವರ ಈ ನಿಲುವಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಹಲವರು ಮತ್ತೆ ಕಾಲೆಳೆಯಲು ಆರಂಭಿಸಿದ್ದಾರೆ. (ಏಜೆನ್ಸೀಸ್)