More

    ಮಂಗಳಮುಖಿಯಾಗಿ ಬದಲಾದ ಡಬ್ಲ್ಯೂಡಬ್ಲ್ಯೂಇ ಸ್ಟಾರ್​!

    ವಾಷಿಂಗ್ಟನ್​: ಡಬ್ಲ್ಯೂಡಬ್ಲ್ಯೂಇ ಸ್ಟಾರ್​ ಒಬ್ಬರು ಇದೀಗ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಇಷ್ಟು ವರ್ಷ ನೆರಳಿನಲ್ಲೇ ಬಚ್ಚಿಟ್ಟುಕೊಂಡು ಬಂದಿದ್ದ ಸತ್ಯ ಇದು ಎಂದು ಮಂಗಳಮುಖಿಯಾಗಿ ಬದಲಾದ ಸ್ಟಾರ್​ ತಮ್ಮ ಜೀವನದ ಸತ್ಯ ಕಥೆಯನ್ನು ಸಮಾಜದೆದುರು ಬಿಚ್ಚಿಟ್ಟುಕೊಂಡಿದ್ದಾರೆ.

    2009ರಿಂದ 2012ರ ಕಾಲದಲ್ಲಿ ಡಬ್ಲ್ಯೂಡಬ್ಲ್ಯೂಇ ನೋಡಿದ್ದವರಿಗೆ ಗಬ್ಬಿ ಟಫ್ಟ್ ನೆನಪಿರುತ್ತಾರೆ. ಗೇಬ್​ ಟೆಫ್ಟ್​ ಎಂದೇ ಖ್ಯಾತಿ ಪಡೆದಿದ್ದ ಆತ ಟೈಲರ್ ರೆಕ್ಸ್ ಹೆಸರಿನ ರಿಂಗ್​ನಿಂದ ಫೇಮಸ್​ ಆಗಿದ್ದರು. 2002ರಲ್ಲಿ ಪ್ರಿಸ್ಸಿಲ್ಲಾ ಜತೆ ದಾಂಪತ್ಯ ಆರಂಭಿಸಿದ ಅವರು 2011ರಲ್ಲಿ ಮಿಯಾ ಹೆಸರಿನ ಹೆಣ್ಣು ಮಗುವಿನ ತಂದೆಯಾದರು. ಅದಾದ ನಂತರ ಕುಟುಂಬಕ್ಕೆ ಹೆಚ್ಚು ಸಮಯ ನೀಡಬೇಕೆಂದು ಹೇಳಿ 2012ರಲ್ಲಿ WWE ತ್ಯಜಿಸಿದರು.

    ಇದೀಗ ಅದೇ ಗೇಬ್​ ಟೆಫ್ಟ್​ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಅಂದ ಹಾಗೆ ಇದು ಇಂದು ನಿನ್ನೆಯ ಬದಲಾವಣೆ ಅಲ್ಲವಂತೆ. ಅವರು 10ನೇ ವಯಸ್ಸಿನಲ್ಲಿದ್ದಾಗಲೇ ಅವರಿಗೆ ಹೆಣ್ಣು ಮಕ್ಕಳಲ್ಲಿ ಒಲವು ಬಂದಿತ್ತಂತೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಅಮ್ಮನ ಕೋಣೆಗೆ ಹೋಗಿ ಅವರ ಉಡುಗೆ ತೊಟ್ಟುಕೊಳ್ಳುತ್ತಿದ್ದರಂತೆ. ಆ ಉಡುಗೆಯೇ ಅವರಿಗೆ ಹೆಚ್ಚು ಸೂಕ್ತ ಎನಿಸುತ್ತಿತ್ತಂತೆ. ಆದರೆ ಆ ವಿಚಾರವನ್ನು ಎಲ್ಲರಿಂದ ಬಚ್ಚಿಟ್ಟುಕೊಂಡೇ ಬಂದಿದ್ದಾರೆ.

    ಇತ್ತೀಚೆಗೆ ದೃಢ ನಿರ್ಧಾರ ಮಾಡಿ ಮಂಗಳಮುಖಿಯಾಗಿ ಬದಲಾಗಿದ್ದೇನೆ ಎಂದು ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈಗ ನಾನು ಯಾರಿಗೂ ಹೆದರುವುದಿಲ್ಲ. ನನ್ನನ್ನು ನನ್ನ ನಿಜ ರೂಪದಲ್ಲಿ ಸಮಾಜದೆದುರು ತೋರ್ಪಡಿಸುಕೊಳ್ಳುವುದಕ್ಕೆ ಯಾವುದೇ ಅಂಜಿಕೆ ಇಲ್ಲ ಎಂದು ಅವರು ಹೇಳಿದ್ದಾರೆ. ಅವರ ಹೆಂಡತಿ ಕೂಡ ಗಂಡನ ನಿರ್ಧಾರದಿಂದ ಸಂತಸ ಮತ್ತು ಹೆಮ್ಮೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ನದಿ ದಂಡೆಗೆ ಹೆಂಡತಿಯನ್ನು ಕರೆಸಿಕೊಂಡು ಸೆಕ್ಸ್ ಮಾಡಿದ; ಅದಾದ ಕೆಲವೇ ಗಂಟೆಗಳಲ್ಲಿ ಹೆಣವಾದ ಹೆಂಡತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts